ಸುದ್ದಿ ಪೋರ್ಟಲ್

Deamweb News

ತಾಜಾ ಸುದ್ದಿ
ಇತ್ತೀಚಿನ ಸುದ್ದಿಗಳನ್ನು ಲೋಡ್ ಮಾಡಲಾಗುತ್ತಿದೆ...

ಮುಖಪುಟ / ಸುದ್ದಿ ವಿವರ

ಭದ್ರಾವತಿ : ಕುಂಚ ಹಿಡಿದ ಕೈಗಳಿಂದ "ಹೈನುಗಾರಿಕೆಯಿಂದ ಜೀವನೋಪಾಯ"






ನಂದೀಶ್ ಭದ್ರಾವತಿ, ಶಿವಮೊಗ್ಗ

ಹೈನುಗಾರಿಕೆಯಿಂದ ಜೀವನೋಪಾಯ ಎಂಬ ಟ್ಯಾಗ್ ಲೈನ್ ನೊಂದಿಗೆ ಶಿಮುಲ್ (ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ವತಿಯಿಂದ ಸಿದ್ದರೂಢ ನಗರದ ವಿಶ್ವೇಶ್ಚರಯ್ಯ ಶಾಲೆಯಲ್ಲಿ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು.


"ಹೈನುಗಾರಿಕೆಯಿಂದ ಜೀವನೋಪಾಯ" (Dairy Farming for Livelihood) ಎಂಬ ವಿಷಯದ ಅಡಿಯಲ್ಲಿ ಈ ಚಿತ್ರಕಲಾ ಸ್ಪರ್ಧೆಯನ್ನು ನಡೆಸಲಾಗಿತ್ತು.ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ  ಬಹುಮಾನ ವಿತರಿಸಲಾಗಿತ್ತು.


ಹೈನೋದ್ಯಮ ಹೇಗಿರುತ್ತದೆ, ರಾಸುಗಳ ಪರಿಪಾಲನೆ,  ಹಸುಗಳಿಂದ ಬದುಕು ಕಟ್ಟಿಕೊಂಡವರ ಕಥೆ ಹೀಗೆ ರೈತ ಹಾಗೂ ಶಿಮುಲ್ ಸಂಪರ್ಕ ಹೇಗೆ ಜೋಡೆತ್ತುಗಳಂತೆ ಕೆಲಸ ಮಾಡುತ್ತದೆ ಎಂದು ಮಕ್ಕಳು ಚಿತ್ರದ ಮೂಲಕ ತೋರಿಸಿಕೊಟ್ಟರು.


ಮಕ್ಕಳ ಮನೋವಿಕಾಸ ಗೊಳಿಸುವ, ಅವರ ಕಲ್ಪನಾ ಶಕ್ತಿ ಹಾಗೂ ಆತ್ಮವಿಶ್ವಾಸ ಹೆಚ್ಚಿಸುವ, ಕ್ರಿಯಾಶೀಲತೆ ಬೆಳೆಸುವ ಕೆಲಸವನ್ನು ಶಿಮುಲ್ ಮಾಡಿತು. ಬೆಳಗ್ಗೆ 11 ರಿಂದ ಎರಡು ಗಂಟೆವರೆಗೆ ನಡೆದ ಈ ಸ್ಪರ್ಧೆಯಲ್ಲಿ ನಗರದ ನಾನಾ  ಶಾಲೆಯ 1 ರಿಂದ 10ನೇ ತರಗತಿಯ ಒಟ್ಟು 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿದರು.  ಮಕ್ಕಳಿಗೆ ಚಿತ್ರಕಲಾ ಪರಿಕರಗಳನ್ನು ಶಿಮುಲ್ ಆಯೋಜಿಸಿತ್ತು.ಉತ್ತೇಜಕ ಪರಿಸರ ಇದ್ದಿದ್ದರಿಂದ ಮಕ್ಕಳು ಸೂರ್ಯ ರಶ್ಮಿಗೆ ಮೈಯೊಡ್ಡಿ ಹಿತಾನುಭವದಲ್ಲಿ ಚಿತ್ರ ಬಿಡಿಸಿ ಖುಷಿಪಟ್ಟರು

‌‌‌‌......


ಶಿಮುಲ್ ಉದ್ದೇಶ


ಮಕ್ಕಳಲ್ಲಿ ನಂದಿನಿ ಬಗ್ಗೆ ಜಾಗೃತಿ ಮೂಡಿಸಲು ಶಿಮುಲ್ ಚಿತ್ರಕಲೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಮೂಲಕ ನಂದಿನಿ ಉತ್ಪನ್ನಗಳ ಬಗ್ಗೆ  ಮಕ್ಕಳ ಮೂಲಕ ಜಾಗೃತಿ ಮೂಡಿಸುವುದು ಶಿಮುಲ್ ಉದ್ದೇಶ

...


ಗೆದ್ದವರಿಗೆ ಪಾರಿತೋಷಕ


ಚಿತ್ರಕಲಾ ಸ್ಪರ್ಧೆಯಲ್ಲಿ ಗೆದ್ದವರಿಗೆ ಪ್ರಥಮ, ದ್ವೀತಿಯ, ತೃತೀಯ ಎಂದು ಪಾರಿತೋಷಕಗಳನ್ನು ವಿತರಿಸಲಾಯಿತು.

...


ಜಡ್ಜ್ ಮೆಂಟ್ ಹೇಗಿತ್ತು


ಹಾಲು ಉತ್ಪನ್ನ ಸೇರಿದಂತೆ ರೈತನ ಜೀವನೋಪಾಯದ ಬಗ್ಗೆ ಬರೆದವರನ್ನು ಜಡ್ಜ್ ಗಳು ಆಯ್ಕೆ ಮಾಡಿದರು.

....


Nandheesh kumar ac
Deamweb News ಪೋರ್ಟಲ್‌ನ ಸಂಪಾದಕೀಯ ಮಂಡಳಿ. ನಿಖರ, ನಿಷ್ಪಕ್ಷಪಾತ ಹಾಗೂ ಕ್ಷಣಕ್ಷಣದ ತಾಜಾ ಸುದ್ದಿಗಳನ್ನು ಒದಗಿಸುವುದು ನಮ್ಮ ಗುರಿ.

ನಿಮ್ಮ ಅಭಿಪ್ರಾಯ ತಿಳಿಸಿ