ಸುದ್ದಿ ಪೋರ್ಟಲ್

Deamweb News

ತಾಜಾ ಸುದ್ದಿ
ಇತ್ತೀಚಿನ ಸುದ್ದಿಗಳನ್ನು ಲೋಡ್ ಮಾಡಲಾಗುತ್ತಿದೆ...

ಮುಖಪುಟ / ಸುದ್ದಿ ವಿವರ

ಸೆ.27 ರಂದು ಶಿವಮೊಗ್ಗದಲ್ಲಿ 2ನೇ ವರ್ಷದ "ಯಕ್ಷ ಸಂಭ್ರಮ" .....



 ಶಿವಮೊಗ್ಗ:ಯಕ್ಷ ಸಂಗಮ ಬಳಗದ ಸಂಯೋಜನೆಯಲ್ಲಿ ಯಕ್ಷರಾಘವ ಜನ್ಸಾಲೆ ಪ್ರತಿಷ್ಠಾನ ಹಾಗೂ ಪ್ರಸಿದ್ಧ  ಕೂಡುವಿಕೆಯಲ್ಲಿ ಶಿವಮೊಗ್ಗದಲ್ಲಿ 2ನೇ ವರ್ಷದ ಯಕ್ಷ ಸಂಭ್ರಮ ಕಾರ್ಯಕ್ರಮವನ್ನ ಸೆ.27 ರ ಸಂಜೆ 4.35ಕ್ಕೆ ಆಯೋಜಿಸಲಾಗಿದೆ.

ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಯಕ್ಷ ಸಂಭ್ರಮ ಕಾರ್ಯಕ್ರಮ ನಡೆಯಲಿದ್ದು, ಶ್ರೀಕೃಷ್ಣ ಕೃಷ್ಣಾರ್ಜುನ ಮತ್ತು ಶ್ರೀರಾಮ ಲವಕುಶ ಪೌರಾಣಿಕ ಪ್ರಸಂಗಗಳ ಪ್ರದರ್ಶನ ನಡೆಯಲಿದೆ.

ಯಕ್ಷಗಾನ ಪ್ರದರ್ಶನ ವಿಶೇಷ ಆಕರ್ಷಣೆಯಾಗಿ ಹಿಮ್ಮೇಳದಲ್ಲಿ ಭಾಗವತರಾಗಿ ಗಾನ ಸಾರಥಿ ರಾಘವೇಂದ್ರ ಆಚಾರ್ಯ ಜನ್ಸಾಲೆ, ರಾಮಕೃಷ್ಣ ಹೆಗಡೆ ಹಿಲ್ಲೂರು ಮತ್ತು ದರ್ಶನ್ ಗೌಡ ಗೋಳಿಹೊಳೆ, ಮದ್ದಲೆಯಲ್ಲಿ ರಾಘವೇಂದ್ರ ಹೆಗಡೆ ಯಲ್ಲಾಪುರ, ಶಶಾಂಕ್ ಆಚಾರ್ಯ ಕಿರಿಮಂಜೇಶ್ವರ ಮತ್ತು ಚಂಡೆಯಲ್ಲಿ ಸುಜನ್ ಹಾಲಾಡಿ, ಪ್ರಜ್ವಲ್ ಮುಂಡಾಡಿ ಭಾಗಿಯಾಗಲಿದ್ದಾರೆ. ಇನ್ನು ಮುಮ್ಮೇಳದಲ್ಲಿ ಕಲಾವಿದರಾದ ವಿದ್ಯಾಧರ ರಾವ್ ಜಲವಳ್ಳಿ, ನಿಲ್ಕೋಡ್ ಶಂಕರ ಹೆಗಡೆ, ಶಶಿಕಾಂತ್ ಶೆಟ್ಟಿ ಕಾರ್ಕಳ, ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ, ಉದಯ ಹೆಗಡೆ ಕಡಬಾಳ,ವಿಶ್ವನಾಥ್ ಆಚಾರ್ಯ ತೊಂಭಟ್ಟು, ಸುಧೀರ್ ಉಪ್ಪೂರು, ಹರೀಶ್ ಮೊಗವೀರ ಜಪ್ತಿ, ಸಂತೋಷ್ ಹೆಂಗವಳ್ಳಿ, ಕೆ.ಜೆ.ಕಾರ್ತಿಕ್, ರವೀಂದ್ರ ದೇವಾಡಿಗ ಕಮಲಶಿಲೆ, ಪುರಂದರ ಮೂಡ್ಕಣಿ, ಕು.ಆತ್ರೇಯ ಗಾಂವ್ಕರ್ ಸೇರಿದಂತೆ ಹಲವು ಹಿರಿ- ಕಿರಿಯ ಕಲಾವಿದರು ಭಾಗವಹಿಸಲಿದ್ದಾರೆ.

ಇನ್ನು ಯಕ್ಷ ಸಂಭ್ರಮ ಕಾರ್ಯಕ್ರಮಕ್ಕೆ ಗೌರವ ಪ್ರವೇಶ ಹೊರತುಪಡಿಸಿ ಪ್ರವೇಶ ದರವಾಗಿ 200 ರೂ. ನಿಗಧಿ ಪಡಿಸಲಾಗಿದೆ. ಶಿವಮೊಗ್ಗದ ಯಕ್ಷಾಭಿಮಾನಿಗಳು ಮಾಹಿತಿ ಹಾಗೂ ಟಿಕೆಟ್ ಗಾಗಿ ನಾಗರಾಜ್ ಮೊ. 9845863549 ರನ್ನ ಸಂಪರ್ಕಿಸುವAತೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಯಕ್ಷಸಂಗಮ ಬಳಗ ಕೋರಿದೆ.

Nandheesh kumar ac
Deamweb News ಪೋರ್ಟಲ್‌ನ ಸಂಪಾದಕೀಯ ಮಂಡಳಿ. ನಿಖರ, ನಿಷ್ಪಕ್ಷಪಾತ ಹಾಗೂ ಕ್ಷಣಕ್ಷಣದ ತಾಜಾ ಸುದ್ದಿಗಳನ್ನು ಒದಗಿಸುವುದು ನಮ್ಮ ಗುರಿ.

ನಿಮ್ಮ ಅಭಿಪ್ರಾಯ ತಿಳಿಸಿ