ಭದ್ರಾವತಿ:ನಗರದ ವೆಲೂರ್ ಶೆಡ್ ನಲ್ಲಿ ನಡೆದ ತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳು ಅಲ್ಲಿನ ಊಟ ತಿಂದು ಅಸ್ವಸ್ಥರಾಗಿರುವ ಘಟನೆ ನಡೆದಿದೆ.ಈ ಮಕ್ಕಳು ನಗರದ ನ್ಯೂಟೌನ್ ತರಂಗ ಶಾಲೆಯ ಮಕ್ಕಳಾಗಿದ್ದು, ಸುಮಾರು 15 ವಿದ್ಯಾರ್ಥಿಗಳು ಹಾಗು 7-8 ಮಂದಿ ಸಾರ್ವಜನಿಕರು ತಿಥಿ ಊಟದ ನಂತರ ಅಸ್ವಸ್ಥರಾಗಿದ್ದಾರೆ.
ತರಂಗ ಶಾಲೆಯ ವಸತಿ ವಿದ್ಯಾರ್ಥಿ ಗಳಿಗೆ ನಗರದ ವೇಲೂರು ಶೆಡ್ ಮನೆಯೊಂದರಲ್ಲಿ ನಡೆಸಲಾಗಿದ್ದ ತಿಥಿ ಕಾರ್ಯಕ್ರಮಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ. ಗುರುವಾರ ಬೆಳಗ್ಗೆ ಊಟದ ನಂತರ ಮಕ್ಕಳು ಅಸ್ವಸ್ಥ ಗೊಂಡಿದ್ದು, ತಕ್ಷಣ ಮಕ್ಕಳನ್ನು ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ. ತಿಥಿ ಊಟದಿಂದ ಸ್ಥಳೀಯರು, ಸಂಬಂಧಿಕರು ಸಹ ಅಸ್ವಸ್ಥಗೊಂಡಿದ್ದು, ಇವರು ಸಹ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇನ್ನು ಆಹಾರ ಗುಣಮಟ್ಟದ ಇಲಾಖೆ ಈ ಆಹಾರವನ್ನು ಪರೀಕ್ಷಿಸಿದ ನಂತರವೇ ಸತ್ಯಾಂಶ ಹೊರಬೀಳಲಿದೆ.ಆಸ್ಪತ್ರೆ ಮಾಹಿತಿ ಪ್ರಕಾರ ಮಕ್ಕಳು ಶಾಂತಿ, ಭೇದಿಯಿಂದ ಬಳಲುತ್ತಿದ್ದು, ಬಹುತೇಕ ಗುಣಮುಖರಾಗಿದ್ದಾರೆ.


ನಿಮ್ಮ ಅಭಿಪ್ರಾಯ ತಿಳಿಸಿ