ಶಿವಮೊಗ್ಗ: ಮರಳು ತುಂಬಿದ ಟಿಪ್ಪರ್ ಲಾರಿಯ ಬೃಹತ್ ಚಕ್ರಕ್ಕೆ ಸಿಲುಕಿ ಯುವತಿ ಸ್ಥಳದಲ್ಲೆ ಸಾವನ್ನೊಪ್ಪಿರುವ ಘಟನೆ ಸಾಗರ ತಾಲ್ಲೂಕಿನ ನೆಲ್ಲಿಬೀಡು ವೃತ್ತದ ಬಳಿ ಮಂಗಳವಾರ ಬೆಳಿಗ್ಗೆ 7.30ಕ್ಕೆ ಸಂಭವಿಸಿದೆ.
ಮಳೂರು ಗ್ರಾಮದ ನಿವಾಸಿ ನೀಲಕುಮಾರ್ ಜೈನ್ ಹಾಗೂ ಅವರ ಪುತ್ರಿ ಅರ್ಚನಾ ಬೈಕ್ನಲ್ಲಿ ನೆಲ್ಲಿಬೀಡು ವೃತ್ತದ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ, ಅದೇ ಮಾರ್ಗದಲ್ಲಿ ಬಂದ ಮರಳು ತುಂಬಿದ ಟಿಪ್ಪರ್ ಲಾರಿ ಬೈಕ್ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ನ ಹಿಂಬದಿಯಲ್ಲಿ ಕುಳಿತಿದ್ದ ಅರ್ಚನಾ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಟಿಪ್ಪರ್ನ ಬೃಹತ್ ಚಕ್ರ ಅವರ ತಲೆ ಭಾಗದ ಮೇಲೆ ಹರಿದ ಪರಿಣಾಮ ಗಂಭೀರವಾಗಿ ಗಾಯಗೊಂಡು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಹಿತಿ ತಿಳಿದು ಕಾರ್ಗಲ್ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಕಾರ್ಗಲ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ಕಾರಣ ಹಾಗೂ ಟಿಪ್ಪರ್ ಚಾಲಕನ ಕುರಿತು ಪೆÇಲೀಸರು ತನಿಖೆ ಮುಂದುವರಿಸಿದ್ದಾರೆ

ನಿಮ್ಮ ಅಭಿಪ್ರಾಯ ತಿಳಿಸಿ