ಭದ್ರಾವತಿ : ಕೆಲ ವರ್ಷಗಳ ಹಿಂದೆ ಯಾವುದೇ ದಿನಸಿ ಪಧಾರ್ಥಗಳು ಬೇಕೆಂದರೆ ಅದು ವೆಂಕಟಸುಬ್ಬಯ್ಯ ಅಂಗಡಿ ಆಗಿತ್ತು..ನಗರದ ಜನ್ನಾಪುರದಲ್ಲಿ ಈ ಅಂಗಡಿ ಸಖತ್ ಫೇಮಸ್ ಆಗಿದ್ದು, ವಿಐಎಸ್ ಎಲ್ ಹಾಗೂ ಎಂಪಿಎಂ ಕಾರ್ಖಾನೆಗಳ ನೌಕರರು ಇಲ್ಲಿಯೇ ದಿನಸಿ ಐಟಂಗಳನ್ನು ಕಟ್ಟಿಸುತ್ತಿದ್ದರು..ಆದರೀಗ ಆ ಅಂಗಡಿಯೂ ಇಲ್ಲ...ಅಂಗಡಿ ನಡೆಸುತ್ತಿದ್ದ ಮಂಜುನಾಥ್ ಕೂಡ ಇಲ್ಲ..
ಭದ್ರಾವತಿಯ ಕೃಷ್ಣ ಪ್ರಾವಿಷನ್ ಅಂಗಡಿಯ ವೆಂಕಟಸುಬ್ಬಯ್ಯ ಅವರ ಪುತ್ರ ಮಂಜುನಾಥ್ ಶುಕ್ರವಾರ ನಿಧನರಾಗಿದ್ದಾರೆ. ಮೃತರಿಗೆ 85 ವರ್ಷ ವಯಸ್ಸಾಗಿತ್ತು.ಇಬ್ಬರು ಹೆಣ್ಣು ಮಕ್ಕಳಿದ್ದು, ಒಬ್ಬ ಮಗಳು ಲಂಡನ್ ನಲ್ಲಿ ಇದ್ದರು. ಇನ್ನೊಬ್ಬ ಮಗಳು ಬೆಂಗಳೂರಿನಲ್ಲಿ ಇದ್ದರು. ಹೀಗಿರುವಾಗ ಅವರನ್ನು ನೋಡಿಕೊಳ್ಳೋದಕ್ಕೆ ಯಾರು ಇರಲಿಲ್ಲ..ಅದೊಂದು ದಿನ ಕಾಲು ಜಾರಿ ಬಿದ್ದು ಹಾಸಿಗೆ ಹಿಡಿದಿದ್ದು, ಹಾಸಿಗೆಯಿಂದ ಕೆಳಗೆ ಬಿದ್ದಿದ್ದರು..ಆದರೆ ಮನೆಯಲ್ಲಿ ಯಾರು ಇಲ್ಲದ ಕಾರಣ ಗೊತ್ತಾಗಿರಲಿಲ್ಲ..ನಂತರ ಶಿವಮೊಗ್ಗದ ಆಸ್ಪತ್ರೆಗೆ ಸೇರಿಸಿದ್ದರು ಚಿಕಿತ್ಸೆ ಫಲಕಾರಿಯಾಗಿರದೇ ಕೊನೆ ಉಸಿರುಳೆದರು ಎಂದು ಮೂಲಗಳು ತಿಳಿಸಿದೆ. ಮಂಜುನಾಥ್ ಜನ್ನಾಪುರದ ಶ್ರೀ ಮಹಾಗಣಪತಿ ದೇವಸ್ಥಾನದ ಕಾರ್ಯದರ್ಶಿಯಾಗಿದ್ದು, ಮೃದು ಸ್ವಭಾವದವರಾಗಿದ್ದರು. ಅಲ್ಲದೇ ಅಪಾರ ದೈವ ಭಕ್ತರಾಗಿದ್ದರು.

ನಿಮ್ಮ ಅಭಿಪ್ರಾಯ ತಿಳಿಸಿ