ಸುದ್ದಿ ಪೋರ್ಟಲ್

Deamweb News

ತಾಜಾ ಸುದ್ದಿ
ಇತ್ತೀಚಿನ ಸುದ್ದಿಗಳನ್ನು ಲೋಡ್ ಮಾಡಲಾಗುತ್ತಿದೆ...

ಮುಖಪುಟ / ಸುದ್ದಿ ವಿವರ

ಭದ್ರಾವತಿ ; ಖಾಕಿ ಜತೆ ಟೈಮ್ಸ್ ಮಕ್ಕಳ ರಾಖಿ












ನಂದೀಶ್ ಭದ್ರಾವತಿ, ಶಿವಮೊಗ್ಗ

ಅಲ್ಲಿ ಖಾಕಿ ಪಡೆ ನೆರೆದಿತ್ತು, ಪುಟ್ಟ ಮಕ್ಕಳು ತಾವೇ ತಯಾರಿಸಿದ ರಾಖಿ ಕಟ್ಟಿ, ಪಾದ ಸ್ಪರ್ಶಿಸುವ ಮೂಲಕ ರಕ್ಷಾ ಬಂಧನ ಆಚರಿಸಿದರು.

ಹೌದು..ನಗರದ ಮಿಲ್ಟ್ರೀ ಕ್ಯಾಂಪನ್ ನಲ್ಲಿ ಮಕ್ಕಳ ಜತೆ ಟೈಮ್ಸ್ ಶಾಲೆಯ ಮಕ್ಕಳು ಪ್ರಾಶುಂಪಾಲೆ ರೇಷ್ಮಾ ನೇತೃತ್ವದಲ್ಲಿ ನೆರೆದಿದ್ದವರಿಗೆ ರಾಖಿ ಕಟ್ಟಿದರು.

ಡಿವೈಎಸ್ಪಿ ಪ್ರಕಾಶ್ ರಾಥೋಡ್ ಗೆ ಟೈಮ್ಸ್ ಶಾಲೆ ಮುಖ್ಯ ಶಿಕ್ಷಕಿ ರೇಷ್ಮಾ ಆರತಿ ಎತ್ತಿ ರಾಖಿ ಕಟ್ಟುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿದರು. ನಂತರ ಮಕ್ಕಳು ಇತರೆ ಸಿಬ್ಬಂದಿಗಳಿಗೆ ರಾಖಿ ಕಟ್ಟಿ ಆರ್ಶೀವಾದ ಪಡೆದರು.

ಪ್ರಾಂಶುಪಾಲೆ ರೇಷ್ಮಾ ಮಾತನಾಡಿ, ರಾಖಿ ಹಬ್ಬ ವಿಶೇಷವಾದದ್ದು. ಇದು ಸಹೋದರಿಯರು ತಮ್ಮ ಸಹೋದರರಿಂದ ರಕ್ಷಣೆ ಬಯಸುವಂತಹ ಅರ್ಥಪೂರ್ಣವಾದ ದಿನ. ಪ್ರತಿ ದಿನ ಪೊಲೀಸರು ಹಾಗೂ ಯೋಧರು ಕರ್ತವ್ಯದಲ್ಲಿರುತ್ತಾರೆ. ಅವರು ಸಮಾಜದ ಹಾಗೂ ನಮ್ಮ ರಕ್ಷಣೆಗಾಗಿ ತ್ಯಾಗ ಮಾಡುತ್ತಾರೆ. ಎಂತಹ ಕಷ್ಟದ ಸನ್ನಿವೇಶದಲ್ಲಿಯೂ ಅವರು ರಕ್ಷಣೆ ನೀಡುವ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ರಾಖಿ ಕಟ್ಟಿ ಸಹೋದರಿಯ ಪ್ರೀತಿಯನ್ನು ವ್ಯಕ್ತಪಡಿಸಿದ್ದೇವೆ. ಆ ಮೂಲಕ ಕರ್ತವ್ಯವನ್ನೂ ನೆನಪಿಸಿದ್ದೇವೆ.

ಸಾರ್ವಜನಿಕರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಡುವವರ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಳವಾದ ಗೌರವವನ್ನು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. "ನಮ್ಮ ಪೊಲೀಸ್ ಅಧಿಕಾರಿಗಳಿಗೆ ರಾಖಿಗಳನ್ನು ಕಟ್ಟುವ ಮೂಲಕ, ಪ್ರತಿದಿನ ನಮಗೆ ಗುರಾಣಿಯಾಗಿ ನಿಲ್ಲುವ, ತಮ್ಮ ಜೀವವನ್ನು ಪಣಕ್ಕಿಡುವ ನಮ್ಮ ಸಮಾಜದ ರಕ್ಷಕರನ್ನು ನಾವು ಗೌರವಿಸುತ್ತಿದ್ದೇವೆ" ಎಂದು ಅವರು ಹೇಳಿದರು.

ಡಿವೈಎಸ್ಪಿ ರಾಥೋಡ್ ಮಾತನಾಡಿ, ಟೈಮ್ಸ್ ಶಾಲೆ ಮಕ್ಕಳು ಈ ರೀತಿ ರಕ್ಷಾ ಬಂಧನವನ್ನು ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ. ಸಹೋದರ ಸಹೋದರಿಯರ ನಡುವೆ ಇರುವ ಸಂಬಂಧವನ್ನು ಈ ಹಬ್ಬ ಗಟ್ಟಿಗೊಳಿಸುತ್ತದೆ. ಒಂದು ಬಂಧವನ್ನು ರಾಖಿ ಬೆಸೆಯುತ್ತದೆ. ನಾವು ಆರಕ್ಷಕರಾಗಿದ್ದು, ಸಮಾಜದ ಎಲ್ಲ ಸಹೋದರಿಯರ ರಕ್ಷಣೆಗೆ ಕಟಿಬದ್ದವಾಗಿದ್ದೇವೆ ಎಂದು ಹೇಳಿದರು. ಒಟ್ಟಿನಲ್ಲಿ ರಾಖಿ ಹಬ್ಬ ಪೊಲೀಸರೊಂದಿಗೆ ಅರ್ಥಪೂರ್ಣವಾಗಿ ನಡೆಯಿತು.

...

ಮಕ್ಕಳೇ ತಯಾರಿಸಿದ ರಾಖಿ

ರಕ್ಷಾ ಬಂಧನದ ನಿಮಿತ್ತ ಮಕ್ಕಳೇ ಮನೆಯಲ್ಲಿ ರಾಖಿ ತಯಾರಿ ಮಾಡಿದ್ದರು. ಪುಟ್ಟ ಕೈಗಳಿಂದ ಮಾಡಿದ ರಾಖಿ ಆರಕ್ಷಕರ ಕೈ ಸೇರಿದಾಗ ಮಕ್ಕಳ ಸಂತೋಷಕ್ಕೆ ಪಾರವೇ ಇರಲಿಲ್ಲ..ಇನ್ನು ಆಕ್ಷಕರು ಮಕ್ಕಳಿಗೆ ಸಿಹಿ ತಿನಿಸುವ ಮೂಲಕ ಒಂದಿಷ್ಟು ಸಂತೋಷ ಪಟ್ಟರು.

...

ಕಾಲಿಗೆ ಬಿದ್ದ ಮಕ್ಕಳು

ಮೊದಲಿಗೆ ಪ್ರಾಂಶುಪಾಲೆ ರೇಷ್ಮಾ ಡಿವೈಎಸ್ಪಿ ಪ್ರಕಾಶ್ ರಾಥೋಡ್ ಗೆ ರಾಖಿ ಕಟ್ಟಿ, ಕಾಲಿಗೆ ಬಿದ್ದರು. ನಂತರ ಮಕ್ಕಳು ಕೂಡ ಪೊಲೀಸರ ಕಾಲಿಗೆ ನಮಸ್ಕರಿಸಿ ಆರ್ಶೀವಾದ ಪಡೆದರು.

....

ಮಕ್ಕಳಿಂದ ತುಂಬಿದ ಪೆರೇಡ್ ಮೈದಾನ

ಇಡೀ ಮೈದಾನ ಮಕ್ಕಳಿಂದ ತುಂಬಿತ್ತು.. ಆರಕ್ಷಕರು ಅವರನ್ನು ಎತ್ತಿಕೊಂಡು ಮುದ್ದಾಡಿದರು..ಚೆನ್ನಾಗಿ ಓದಬೇಕು, ನಮ್ಮ ಪೊಲೀಸ್ ಆಗಬೇಕೆಂದು ಹಿತನುಡಿಗಳನ್ನಾಡಿದರು. ಕೆಲವರು ಸೆಲ್ಫಿ ತೆಗೆಸಿಕೊಂಡು ತಮ್ಮ ಡಿಪಿಗೆ ಹಾಕಿಕೊಂಡರು.

...

ಮಹಿಳಾ ಪೊಲೀಸ್ ಗೂ ರಾಖಿ ಕಟ್ಟಿದ ಮಕ್ಕಳು

ಪೆರೆಡ್ ಮೈದಾನದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇದ್ದರೂ, ಮಕ್ಕಳು ಅವರಿಗೂ ರಾಖಿ ಕಟ್ಟಿದರು. ಅವರು ಕೂಡ ಮಕ್ಕಳಿಗೆ ಆರ್ಶೀವಾದ ನೀಡಿದರು.

Nandheesh kumar ac
Deamweb News ಪೋರ್ಟಲ್‌ನ ಸಂಪಾದಕೀಯ ಮಂಡಳಿ. ನಿಖರ, ನಿಷ್ಪಕ್ಷಪಾತ ಹಾಗೂ ಕ್ಷಣಕ್ಷಣದ ತಾಜಾ ಸುದ್ದಿಗಳನ್ನು ಒದಗಿಸುವುದು ನಮ್ಮ ಗುರಿ.

ನಿಮ್ಮ ಅಭಿಪ್ರಾಯ ತಿಳಿಸಿ