ಶಿವಮೊಗ್ಗ : ಆಕೆ ಗಂಡ ಜೆಸಿಬಿ ಆಪರೇಟರ್, ದೂರದ ಕೋಟೆನಾಡಿನ ಹಳ್ಳಿಯೊಂದರ ನಿವಾಸಿ...ಮೂರು ಮಕ್ಕಳೊಂದಿಗೆ ಸವಳಂಗದ ಮನೆಯೊಂದರಲ್ಲಿ ಸಂಸಾರ ನಡೆಸುತ್ತಿದ್ದಳು..ಆದರೆ ಇದ್ದಕ್ಕಿದ್ದಂತೆ ಮನೆಯಲ್ಲಿ ಗಂಡನ ಜಗಳ ಆಡಿದ್ದಾಳೆ..ಬಳಿಕ ತನ್ನ ಮೂರು ಮಕ್ಕಳೊಂದಿಗೆ ತುಂಗಾ ನದಿಗೆ ಹಾರಿದ್ದಾಳೆ.
ಈ ಘಟನೆ ಶಿವಮೊಗ್ಗದ ಚಿಕ್ಕಲ್ ರಸ್ತೆಯಲ್ಲಿರುವ ಅರಕೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ನಡೆದಿದೆ. ಚಿತ್ರದುರ್ಗದ ಹೊಸುರೂ ಗ್ರಾಮದ ಭವಾನಿ ಆತ್ಮಹತ್ಯೆಕ್ಕೆ ಯತ್ನಿಸಿದವಳು.
ಇಲ್ಲಿ ರೈಲ್ವೆ ಟ್ರ್ಯಾಕ್ ಇದ್ದು, ಇದರ ಮೇಲೆ ತನ್ನ ಮೂವರ ಮಕ್ಕಳ ಜತೆ ನಡೆದುಕೊಂಡು ಹೋಗಿದ್ದಾಳೆ. ನಂತರ ಸೆರೆಗಿಗೆ ಮಗುವೊಂದನ್ನು ಕಟ್ಟಿಕೊಂಡು ತುಂಗಾ ನದಿಗೆ ಹಾರಿದ್ದಾಳೆ. ಈ ಸಂದರ್ಭದಲ್ಲಿ ಸ್ಥಳೀಯರು ತಾಯಿ ಭವಾನಿ ಹಾಗೂ ಒಂದು ಮಗುವನ್ನು ರಕ್ಷಿಸಿದ್ದಾರೆ.
ಮಕ್ಕಳಿಗಾಗಿ ತಾಯಿಯ ಆಕ್ರಂದನ
"ನನ್ನ ಇನ್ನಿಬ್ಬರು ಮಕ್ಕಳನ್ನು ರಕ್ಷಿಸಿ" ಎಂದು ತಾಯಿ ನದಿಯ ದಂಡೆಯಲ್ಲಿ ಕಣ್ಣೀರಿಡುತ್ತಾ ಗೋಳಾಡುತ್ತಿದ್ದು, ಸ್ಥಳೀಯರು ಮಕ್ಕಳ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದು, ಶೋಧ ಕಾರ್ಯ ಮಂಗಳವಾರವೂ ಮುಂದುವರೆದಿದೆ. ಸದ್ಯ ಇಬ್ಬರು ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದಾರೆ.
ಘಟನೆ ವಿವರ
ಭವಾನಿ, ಸಾನ್ವಿಕಾ (6), ತನ್ವಿಕಾ (4) ಮತ್ತು ಹನ್ನೊಂದು ತಿಂಗಳ ಗಂಡು ಮಗುವಿನೊಂದಿಗೆ ರೈಲ್ವೆ ಹಳಿ ಮೇಲೆ ಹೋಗುವುದನ್ನು ನವೀನ್ ಎಂಬುವವರು ಗಮನಿಸಿದ್ದರು. ಹಳಿಯ ಮೇಲೆ ಹೋಗದಂತೆ ಕೂಗಿ ಹೇಳಿದ್ದರು. ಅಷ್ಟರಲ್ಲಿ ಭವಾನಿ, ಇಬ್ಬರು ಹೆಣ್ಮಕ್ಕಳನ್ನು ನದಿಗೆ ತಳ್ಳಿ ಗಂಡು ಮಗುವಿನ ಜೊತೆಗೆ ತಾನು ಹೊಳೆಗೆ ಹಾರಿದ್ದರು. ಇದನ್ನು ಗಮನಿಸಿದ ನವೀನ್ ಕೂಡಲೆ ನದಿಗೆ ಹಾರಿ ತಾಯಿ ಮತ್ತು ಗಂಡು ಮಗುವನ್ನು ರಕ್ಷಿಸಿದ್ದಾರೆ.ಘಟನೆಯ ಮಾಹಿತಿ ತಿಳಿದು ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಟುಂಬದ ಹಿನ್ನೆಲೆ ಹಾಗೂ ಘಟನೆಗೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಭವಾನಿಮತ್ತು 11 ವರ್ಷದ ಮಗುವನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ.
ದೇವಸ್ಥಾನದ ಬಳಿ ಭದ್ರತೆ ಇದ್ದರೂ ಘಟನೆ
ಅ
ರಕೇಶ್ವರ ದೇವಸ್ಥಾನದ ಬಳಿ ಭದ್ರತೆಗಾಗಿ ಸೆಕ್ಯುರಿಟಿ ಸಿಬ್ಬಂದಿ ಇದ್ದರೂ ಇಂತಹ ಘಟನೆ ನಡೆದಿರುವುದು ದುರದೃಷ್ಟಕರ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಪ್ರದೇಶದಲ್ಲಿ ಈ ವರ್ಷದಲ್ಲೇ ಇಂತಹ ಘಟನೆಗಳು ಮೂರು ಬಾರಿ ನಡೆದಿವೆ ಎಂದು ಸ್ಥಳೀಯರು ಆರೋಪಿಸಿದ್ದು, ನದಿ ಪ್ರದೇಶದ ಬಳಿ ಇನ್ನಷ್ಟು ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.


ನಿಮ್ಮ ಅಭಿಪ್ರಾಯ ತಿಳಿಸಿ