ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಪ್ತಪದಿ ತುಳಿದು ಜೀವನ ಪೂರ್ತಿ ನಿನ್ನ ಜತೆ ನಾನು ಇರುತ್ತೇನೆ ಎನ್ನುವ ಹೆಣ್ಣು ಮಕ್ಕಳು ಆಸ್ತಿ ಆಸೆಗೆ, ಪ್ರಿಯಕರನ ಅಂತರಾಳಕ್ಕೆ ನುಗ್ಗಿ ಅಂತರಕರಣ ಇಲ್ಲದೇ ಕಟ್ಟಿಕೊಂಡ ಗಂಡನನ್ನೇ ಕೊಲೆ ಮಾಡುತ್ತಿದ್ದು, ಈ ಪ್ರಕರಣ ಇದಕ್ಕೆ ಸಾಕ್ಷಿಯಾಗಿದೆ..
ಚಿಕ್ಕಬಾಣಾವರದ ಗುಟ್ಟೆ ಬಸವೇಶ್ವರ ನಗರದಲ್ಲಿ ಪತಿ ಅಭಿ ಅಭಿನಂದನ್ ಹಾಗೂ ಪತ್ನಿ ಹರಿಣಿ ಜತೆ ಮಗ ಯದುವೀರ್ ಕೂಡ ವಾಸಾವಾಗಿದ್ದು, ಸಂಸಾರ ಚೆನ್ನಾಗಿಯೇ ಇರುತ್ತದೆ...ಆದರೆ ಯಾವಾಗ ಇವರ ಬಾಳಲ್ಲಿ ವಿನಯ್ ಎಂಬಾತ ಎಂಟ್ರಿ ಕೊಟ್ಟನೋ ಅಂದಿನಿಂದ ಕಟ್ಟಿಕೊಂಡ ಅನಾಥ ಶವವಾದ...ಪತ್ನಿ ಹರಿಣಿ ಅರಿವಿಲ್ಲದೇ ಪ್ರಿಯಕರಣ ಬೆಚ್ಚುಗೆಯ ಅಪ್ಪಿಗೆಗೆ ಕಾಯುತ್ತಿದ್ದಳು..ಗಂಡ ಇಲ್ಲದ ವೇಳೆ ಪ್ರೀತಿ ಚೆಲ್ಲಾಟವಾಡಿ, ಏನೋ ಅರಿಯದಂತೆ ನಟನೆ ಮಾಡುತ್ತಿದ್ದಳು...ಅಲ್ಲದೇ ಡೈವೋರ್ಸ್ ಕೊಡುವಂತೆ ಗಂಡ ಅಭಿನಂದನ ಗೆ ಒತ್ತಾಯಿಸುತ್ತಿದ್ದಳು..ಆದರೆ ಗಂಡ ತನ್ನ ಮಗನಿಗೋಸ್ಕರ ಡೈವೋರ್ಸ್ ಕೊಡೋದಿಲ್ಲ ಎಂದಿದ್ದರು..
ಗಂಡನನ್ನು ಕೊಲ್ಲಲು ಕಾರಣವೇನು?
ಗಂಡನ ಹೆಸರಲ್ಲಿ ಒಂದಿಷ್ಟು ಆಸ್ತಿ ಇದ್ದು, ಆತನನ್ನು ಕೊಲೆ ಮಾಡಿದರೆ ನಾವಿಬ್ಬರು ಚೆನ್ನಾಗಿರಬಹುದೇಂದು ಪ್ರಿಯಕರನ ಜತೆ ಸೇರಿ ಪತಿಯನ್ನು ಮರ್ಡರ್ ಮಾಡೋದಕ್ಕೆ ಹರಿಣಿ ಸ್ಕೇಚ್ ಹಾಕಿದ್ದಳು...ಆ ದಿನ ರಾತ್ರಿ ಗಂಡ ಅಭಿನಂದನ್ ಜತೆ ಹರಿಣಿ ಡೈವೋರ್ಸ್ ಕೊಡುವಂತೆ ಜಗಳವಾಡಿದ್ದಳು...ಇಬ್ಬರು ಕೂಡ ಬೇರೆ, ಬೇರೆ ರೂಮಿನಲ್ಲಿ ಮಲಗಿದ್ದರು..ಇದಾದ ಬಳಿಕ ಹರಿಣಿ ತನ್ನ ಪ್ರಿಯಕರನನ್ನು ಕರೆಸಿ ಕೊಲೆ ಮಾಡಲು ಮೂಹೂರ್ತ ಇಟ್ಟರು..ಹೀಗಿರುವಾಗ ಗಂಡ ಹಾಗೂ ಮಗ ಯದುವೀರ್ ರೂಮಿನಲ್ಲಿ ಯಾವುದೇ ಅರಿವಿಲ್ಲದೇ ಸುಖವಾಗಿ ಮಲಗಿದ್ದರು..ಹೀಗಿರುವಾಗ ಪಕ್ಕದ ರೂಮಿನಲ್ಲಿದ್ದ ಹರಿಣಿ ತನ್ನ ಪ್ರಿಯಕರನ ಜತೆ ಸೇರಿ ಗಂಡ ಅಭಿನಂದನ್ ಗೆ ದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಿದಳು.
ಗಂಡನ ಜತೆ ತನ್ನ ಕುಡಿಯನ್ನೇ ಕೊಂದಳು
ಗಂಡ ಅಭಿನಂದನ್ ನ್ನು ಉಸಿರುಗಟ್ಟಿಸಿ ಸಾಯಿಸುತ್ತಿರುವಾಗ ಅಭಿನಂದನ್ ಒದ್ದಾಡಿದ್ದಾರೆ..ಆಗ ಹರಿಣಿ ಚೌಟಿನಿಂದ ಮೂಗಿಗೆ ಒಡೆದಿದ್ದಾಳೆ..ಈ ವೇಳೆ ಪಕ್ಕದಲ್ಲಿಯೇ ಮಲಗಿದ್ದ ಮಗ ಯದುವೀರ್ ಈ ಕೃತ್ಯ ನೋಡಿದ್ದಾನೆ...ಮಗ ಬದುಕಿದ್ದರೇ ತನ್ನ ಬಂಡಾವಾಳ ಗೊತ್ತಾಗುತ್ತದೆ ಎಂದು ಸ್ವಂತ ಮಗನನ್ನೂ ಕೊಂದಳು ತಾಯಿ ಹರಿಣಿ.
ಕೊಲೆ ಮಾಡಿ ಕಥೆ ಕಟ್ಟಿದ ಹರಿಣಿ
ಪತ್ನಿ ಹರಿಣಿ ಇಬ್ಬರನ್ನು ಕೊಂದು ಬೆಳ್ಳಗ್ಗೆ ಪೊಲೀಸರಿಗೆ ಕರೆ ಮಾಡಿದ್ದಳು...ಪೊಲೀಸರಿಗೆ ರಾತ್ರಿ ಪತಿಯ ಕಿವಿಯಲ್ಲಿ ರಕ್ತ ಬರುತ್ತಿತ್ತು. ಗಾಯಕ್ಕೆ ಅರಿಶಿಣ ಹಚ್ಚಿ ಮಲಗಿಸಿದ್ದೆ. ಪತಿ ಹಾಗೂ ಮಗು ಒಂದು ಕೋಣೆಯಲ್ಲಿ ಮಲಗಿದ್ದರು. ನಾನು
ಪ್ರತ್ಯೇಕ ಕೊಠಡಿಯಲ್ಲಿ ಮಲಗಿದ್ದೆ. ಬೆಳಿಗ್ಗೆ ಎದ್ದು ನೋಡಿದಾಗ ಪತಿ, ಮಗು ಮೃತಪಟ್ಟಿದ್ದರು' ಎಂಬುದಾಗಿ ಪೊಲೀಸರ ವಿಚಾರಣೆ ವೇಳೆ ಹರಿಣಿ ಸುಳ್ಳಿನ ಕಥೆ ಹೆಣೆದಿದ್ದಳು. ಆದರೆ, ಅನುಮಾನಗೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಹರಿಣಿ ಹಾಗೂ ಪ್ರಿಯಕರ ವಿನಯ್ ಸೇರಿಕೊಂಡು ಕೊಲೆ ಮಾಡಿರುವುದು ಗೊತ್ತಾಗಿದೆ ಎಂದು ಮೂಲಗಳು ಹೇಳಿವೆ.
ಸೌಟಿನಿಂದ ಒಡೆದು ಕೊಲೆ
'ಸಂಬಂಧಿಕರ ಮನೆಗೆ ಹೋಗಿದ್ದ ಅಭಿನಂದನ್, ಹರಿಣಿ ಹಾಗೂ ಯದುವೀರ್ ಭಾನುವಾರ ಸಂಜೆ ವಾಪಸ್ ಬಂದಿದ್ದರು. ಪತಿ, ಮಗು ಮಲಗಿದ ಮೇಲೆ ಪ್ರಿಯಕರ ವಿಯ್ಗೆ ಹರಿಣಿ ಕರೆ ಮಾಡಿ, ಮನೆಗೆ ಕರೆಸಿಕೊಂಡಿದ್ದಳು. ಅಡುಗೆ ಕೋಣೆಯಲ್ಲಿದ್ದ ಸೌಟಿನಿಂದ ಬಲವಾಗಿ ತಲೆಗೆ ಹೊಡೆದು ಅಭಿನಂದನ್ನನ್ನು ಮೊದಲು ಕೊಲೆ ಮಾಡಲಾಗಿತ್ತು.
ಸಾಕ್ಷ್ಯ ನಾಶಕ್ಕೆ ಯತ್ನ, ಸಿಸಿ ಟಿವಿ ಆಫ್
ಮನೆಯಲ್ಲಿ ಸಿ.ಸಿ. ಟಿ.ವಿ ಕ್ಯಾಮೆರಾವನ್ನು ಅಳವಡಿಸಲಾ ಗಿತ್ತು. 2 ದಿನಗಳ ಹಿಂದೆಯೇ ಕ್ಯಾಮೆರಾ ವನ್ನು ಆಫ್ ಮಾಡಿಕೊಂಡಿರುವುದು ತನಿಖೆಯಿಂದ ದೃಢಪಟ್ಟಿದೆ.
'ಕೃತ್ಯ ಎಸಗಿದ ಮೇಲೆ ಕೊಠಡಿಯಲ್ಲಿ ರಕ್ತದ ಕಲೆಗಳಿದ್ದವು. ಇಬ್ಬರೂ ಸೇರಿ ರಕ್ತದ ಕಲೆಗಳನ್ನು ತೊಳೆದಿದ್ದರು.ತಂದೆಯ ನಂತರ, ಮಗುವನ್ನು ಮೃತದೇಹದ ಪಕ್ಕದಲ್ಲಿ ಮಲಗಿಸಿ, ತಂದೆಯೇ ಉಸಿರುಗಟ್ಟಿಸಿ ಸಾಯಿಸಿದ್ದಾನೆ ಎಂಬಂತೆ ಬಿಂಬಿಸಲು ಯತ್ನಿಸಿದ್ದರು.
ಸ್ಪ್ಯಾಪ್ ಚಾಟ್ ಮೂಲಕ ಪರಿಚಯ, ಪ್ರೀತಿ
ಎರಡು ವರ್ಷದ ಹಿಂದೆ ಸ್ಟ್ರಾಪ್ ಚಾಟ್ ಮೂಲಕ ಹರಿಣಿ ಹಾಗೂ ವಿನಯ್ ಪರಸ್ಪರ ಪರಿಚಯವಾಗಿದ್ದರು. ನಂತರ ಪ್ರೀತಿಗೆ ತಿರುಗಿ, ಇಬ್ಬರೂ ಸಲುಗೆಯಿಂದ ಇದ್ದರು ಎಂದು ಮೂಲಗಳು ಹೇಳಿವೆ.
ಸಾಫ್ಟವೇರ್ ಕಂಪನಿಯಲ್ಲಿ ಅಭಿನಂದನ್ ಕೆಲಸ
2021ರಲ್ಲಿ ಹರಿಣಿ ಹಾಗೂ ಅಭಿನಂದನ್ ಮದುವೆ ನಡೆದಿತ್ತು. ಇಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ. ಎಲೆಕ್ಟ್ರಾನಿಕ್ ಸಿಟಿಯ ಸಾಫ್ಟ್ವೇರ್ ಕಂಪನಿಯಲ್ಲಿ ಅಭಿನಂದನ್ ಕೆಲಸ ಮಾಡುತ್ತಿದ್ದರು.
ಪ್ರಿಯಕರ ವಿನಯ್ ಫ್ಯಾಕ್ಟರಿಯಲ್ಲಿ ಕೆಲಸ
ಪ್ರಿಯಕರ ಕನಕಪುರದ ವಿನಯ್ ಪೀಣ್ಯದ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಕೃತ್ಯ ಎಸಗಿದ ಮೇಲೆ ವಿನಯ್ ಫೋನ್ ಸ್ವಿಚ್ ಆನ್ ಮಾಡಿಕೊಂಡಿದ್ದ. ತಾಂತ್ರಿಕ ಸುಳಿವು ಆಧರಿಸಿ ಆತನನ್ನು ಹಾರೋಹಳ್ಳಿಯಲ್ಲಿ ಬಂಧಿಸಿ ನಗರಕ್ಕೆ ಕರೆ ತರಲಾಗಿದೆ' ಎಂದು ಪೊಲೀಸರು ಹೇಳಿದರು. ಒಟ್ಟಾರೆ ತಂದೆ, ಮಗು ಮೃತಪಟ್ಟ ಪ್ರಕರಣಕ್ಕೆ ಪೊಲೀಸ್ ತನಿಖೆ ವೇಳೆ ಪತಿ ಅಭಿ ಅಭಿನಂದನ್ ನಂದನ್(34) ಹಾಗೂ ಮಗು ಯದು ವೀರ್ನನ್ನು (4) ಪ್ರಿಯಕರನೊಂದಿಗೆ ಸೇರಿ ಪತ್ನಿ ಕೊಲೆ ಮಾಡಿರುವುದು ಸಾಬೀತಾಗಿದ್ದು. ಆರೋಪಿಗಳಾದ ಹರಿಣಿ (33) ಹಾಗೂ ಪ್ರಿಯಕರ ವಿನಯ್ನನ್ನು (30) ಚಿಕ್ಕಬಾಣಾವರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
'ಆರೋಪಿಗಳನ್ನು ಬಂಧಿಸಿ, ಹೆಚ್ಚಿನ ತನಿಖೆಗಾಗಿ ವಶಕ್ಕೆ ಪಡೆಯಲಾಗಿದೆ. ಅಭಿನಂದನ್ ತಾಯಿ ಭಾಗ್ಯಮ್ಮ ನೀಡಿದ ದೂರು ಆಧರಿಸಿ ತನಿಖೆ ನಡೆಸಲಾಗುತ್ತಿದೆ
ಯುವಕನೊಂದಿಗೆ ಹೋಗಿದ್ದಳು...'
'ನನ್ನ ಸೊಸೆ ಹರಿಣಿ ಈ ಹಿಂದೆ ವಿನಯ್ ಎಂಬ ಯುವಕನ ಜತೆಗೆ ಹೋಗಿ ಸುಮಾರು ಎರಡು ತಿಂಗಳ ನಂತರ ಮನೆಗೆ ಬಂದಿದ್ದಳು. ಪ್ರಿಯಕರನೊಂದಿಗೆ ಸೇರಿ ಪುತ್ರ ಹಾಗೂ ಮೊಮ್ಮಗನನ್ನು ಕೊಲೆ ಮಾಡಿದ್ದಾಳೆ' ಎಂದು ಅಭಿನಂದನ್ ತಾಯಿ ಭಾಗ್ಯಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
....
ವಿಚ್ಛೇದನದ ಗಲಾಟೆ & ಕೊಲೆಗೆ ಸ್ಕೆಚ್:
ನಿತ್ಯ ಪತಿ ಅಭಿನಂದನ್ ಬಳಿ ವಿಚ್ಛೇದನ (ಡಿವೋರ್ಸ್) ನೀಡುವಂತೆ ಹರಿಣಿ ಗಲಾಟೆ ಮಾಡುತ್ತಿದ್ದಳು.ಮಗನ ಭವಿಷ್ಯ ಹಾಳಾಗುತ್ತದೆ ಎಂಬ ಕಾರಣಕ್ಕೆ ಅಭಿನಂದನ್ ವಿಚ್ಛೇದನ ನೀಡಲು ನಿರಾಕರಿಸಿದ್ದರು. ಈ ಹಿಂದೆ ಮೂರು ತಿಂಗಳು ಮನೆ ಬಿಟ್ಟು ಹೋಗಿದ್ದ ಹರಿಣಿ, ಪತಿಯನ್ನು ಮುಗಿಸಲು ಮೊದಲೇ ಸಂಚು ರೂಪಿಸಿದ್ದಳು.
....
ಭಾನುವಾರ ರಾತ್ರಿ ನಡೆದಿದ್ದೇನು?
ಭಾನುವಾರ ರಾತ್ರಿಯೂ ದಂಪತಿ ನಡುವೆ ಜಗಳವಾಗಿದ್ದು, ಬೇಸರಗೊಂಡ ಅಭಿನಂದನ್ ಮಗ ಯಧುವೀರ್ನೊಂದಿಗೆ ಪ್ರತ್ಯೇಕ ಕೋಣೆಯಲ್ಲಿ ಮಲಗಿದ್ದರು.ರಾತ್ರಿ ಸುಮಾರು 11 ಗಂಟೆಗೆ ಮನೆಯ ಸಿಸಿಟಿವಿ (CCTV) ಕ್ಯಾಮೆರಾಗಳನ್ನು ಆಫ್ ಮಾಡಿದ ಹರಿಣಿ, ತನ್ನ ಪ್ರಿಯಕರನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ರೂಮಿಗೆ ನುಗ್ಗಿದ ಪ್ರಿಯಕರ, ಗಾಢ ನಿದ್ದೆಯಲ್ಲಿದ್ದ ಅಭಿನಂದನ್ ತಲೆಗೆ ಬಲವಾದ ಆಯುಧ/ಸೌಟಿನಿಂದ ಹೊಡೆದು ಹತ್ಯೆ ಮಾಡಿದ್ದಾನೆ.
...
ಸಾಕ್ಷಿ ನಾಶಕ್ಕೆ ಕಂದಮ್ಮನ ಕೊಲೆ:
* ತಂದೆಯ ಮೇಲಿನ ಹಲ್ಲೆಯನ್ನು ಕಂಡು ಎಚ್ಚರಗೊಂಡ ಪುಟ್ಟ ಮಗು ಯಧುವೀರ್, ಎಲ್ಲವನ್ನೂ ನೋಡಿ ಎಲ್ಲಿ ಸಿಕ್ಕಿಹಾಕಿಸುತ್ತಾನೋ ಎಂಬ ಭಯದಿಂದ, ಹೆತ್ತ ತಾಯಿ ಹರಿಣಿಯೇ ಮಗುವನ್ನು ದಿಂಬಿನಿಂದ ಉಸಿರುಗಟ್ಟಿಸಿ ಬರ್ಬರವಾಗಿ ಕೊಂದಿದ್ದಾಳೆ.ನಂತರ ಮನೆಯಲ್ಲಿದ್ದ ರಕ್ತದ ಕಲೆಗಳನ್ನು ಬಟ್ಟೆಯಿಂದ ಒರೆಸಿ ಸ್ವಚ್ಛಗೊಳಿಸಿ, ಪ್ರಿಯಕರನನ್ನು ಅಲ್ಲಿಂದ ಕಳುಹಿಸಿದ್ದಾಳೆ.ತಂದೆಯೇ ಮಗುವಿನ ಮೇಲೆ ಬಿದ್ದು ಉಸಿರುಗಟ್ಟಿಸಿ ಸತ್ತಂತೆ ಕಥೆ ಕಟ್ಟಿ, ಏನೂ ಅರಿಯದವಳಂತೆ ಬೆಳಗ್ಗೆ 7:30ಕ್ಕೆ ಪೊಲೀಸರಿಗೆ ಕರೆ ಮಾಡಿ ನಾಟಕವಾಡಿದ್ದಳು.
...
.
ಪೊಲೀಸರ ಚಾಣಾಕ್ಷ ತನಿಖೆಗೆ ಸಿಕ್ಕಿಬಿದ್ದ ಆರೋಪಿ:
ಸ್ಥಳಕ್ಕೆ ಬಂದ ಪೊಲೀಸರಿಗೆ ಸಿಸಿಟಿವಿ ಆಫ್ ಆಗಿರುವುದು ಮತ್ತು ಹರಿಣಿಯ ಹೇಳಿಕೆಗಳಲ್ಲಿನ ವ್ಯತ್ಯಾಸಗಳು ಭಾರೀ ಅನುಮಾನ ಮೂಡಿಸಿತ್ತು. ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಪಾಪಿ ತಾಯಿ ಹರಿಣಿ ಇಡೀ ಕೊಲೆ ಕೃತ್ಯವನ್ನು ಎಳೆಎಳೆಯಾಗಿ ಬಾಯ್ಬಿಟ್ಟಿದ್ದಾಳೆ.






ನಿಮ್ಮ ಅಭಿಪ್ರಾಯ ತಿಳಿಸಿ