ಸಾಸ್ವೆಹಳ್ಳಿ (ಹೊನ್ನಾಳಿ) : ಹಣಕಾಸಿನ ವಿಷಯಕ್ಕೆ ಎರಡು ಕುಟುಂಬಗಳ ನಡುವೆ ನಡೆದ ಜಗಳದಲ್ಲಿ ಚಾಕು ಇರಿತದಿಂದ ಯುವಕನೊಬ್ಬನ ಹತ್ಯೆಯಾಗಿರುವ ಘಟನೆ ಹೊನ್ನಾಳಿ ತಾಲೂಕು ಚೀಲಾಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ.ಚೀಲಾಪುರ ಗ್ರಾಮದ ಯುವಕ ಜಾಹೀರ್ ಖಾನ್ (19) ಕೊಲೆಯಾದ ಯುವಕ.
ಮಗಳವಾರ ರಾತ್ರಿ ಅಕ್ಕ ಪಕ್ಕದ ಎರಡು ಮನೆಯವರ ಮಧ್ಯ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಜಗಳವಾಗಿದೆ. ಈ ಸಮಯದಲ್ಲಿ ಸಲೀಮ್ ಸಾಬ್, ಸುಬಾನ್, ಚಮನ್ ಸಾಬ್,ಮುಜಾಬ್, ಎಂಬುವರು ಹತ್ಯೆ ಮಾಡಿದ್ದಾರೆ. ಮೆಗಾನ್ ಆಸ್ಪತ್ರೆ ಗೆ ತಕ್ಷಣ ಕರೆದುಕೊಂಡು ಹೋಗಿದ್ದಾರೆ, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.ಕೊಲೆಯಾದ ಯುವಕನ ತಂದೆ ಬುಡನ್ ಸಾಬ್ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಹೆಚ್ ಟಿ ಶೇಖರ್, ಹಾಗೂ ಹೊನ್ನಾಳಿ ಸಿಪಿಐ ಸುನೀಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು

ನಿಮ್ಮ ಅಭಿಪ್ರಾಯ ತಿಳಿಸಿ