ಭದ್ರಾವತಿ ; ಅಲ್ಲಿ ಜನರು ಮನೆ ಜಂಜಾಟ ಬಿಟ್ಟು ಎಸ್.ಜಾನಕಿ ಹಾಡಿದ ಹಾಡುಗಳನ್ನು ಶಾಂತವಾಗಿ ಕೇಳುತ್ತಿದ್ದರು..ಈ ನಡುವೆ ರಾಜಕಾರಣಿಗಳ ಮಕ್ಕಳು, ಬೆಂಬಲಿಗರನ್ನು, ಕಾರ್ಯಕ್ರಮಕ್ಕೆ ಆಯೋಜಕರು ಆಹ್ವಾನಿಸಿದ್ದರು..ಇವರಿಬ್ಬರು ಹಾಡು ಕೇಳಿ ಸುಮ್ಮನೆ ಮನೆಗೆ ಹೋಗಿದ್ದರೇ ಏನು ಆಗುತ್ತಿರಲಿಲ್ಲ..ಆದರೆ ಕಾರ್ಯಕ್ರಮ ಮುಗಿಯುವ ವೇಳೆ ನಡೆದ ಆ ಗಲಾಟೆ ನಾನಾ ಪ್ರಶ್ನೆಗಳನ್ನು ಹುಟ್ಟು ಹಾಕಿತ್ತು..
ಸ್ಥಳೀಯ ಮಲ್ಲೇಶ್ವರ ಸಭಾಭವನದಲ್ಲಿ ಖ್ಯಾತ ಗಾಯಕಿ ಎಸ್. ಜಾನಕಿ ಅವರ ಸ್ಮರಣಾರ್ಥ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ವೇಳೆ ಬಂದಿದ್ದ ಸಾರ್ವಜನಿಕರಿಗೆ ಮಾಜಿ ಪೊಲೀಸ್ ಸಿಬ್ಬಂದಿ ಉಮೇಶ್ ಅನ್ನದಾನದ ಸೇವೆ ಮಾಡಿದ್ದರು. ಇದೇ ಸಭಾಂಗಣದ ವೇದಿಕೆಯಲ್ಲಿ ಭದ್ರಾವತಿ ಶಾಸಕರ ಮಗ ಗಣೇಶ್ ಉಪಸ್ಥಿತರಿದ್ದರು.
ಯಾಕಾಯಿತು ಗಲಾಟೆ
ಮಾಜಿ ಪೊಲೀಸ್ ಉಮೇಶ್ ರನ್ನು ವೇದಿಕೆ ಮೇಲೆ ಬರುವಂತೆ ಶಾಸಕ ಸಂಗಮೇಶ್ ಪುತ್ರ ಗಣೇಶ್ ಹಾಗೂ ಆಯೋಜಕರು ಕೋರಿದ್ದರು. ಆದರೆ "ನಾನು ಭ್ರಷ್ಟರ ಜೊತೆ ಒಂದೇ ವೇದಿಕೆಯಲ್ಲಿ ಕೂರುವುದಿಲ್ಲ" ಎಂದು ಉಮೇಶ್ ನೇರವಾಗಿ ಹೇಳಿ ಆಹ್ವಾನವನ್ನು ತಿರಸ್ಕರಿಸಿದ್ದರು ಎಂಬ ಮಾತು ಕೇಳಿ ಬಂದಿದೆ. ಈ ಹೇಳಿಕೆಯಿಂದ ಗಲಾಟೆ ಶುರುವಾಗಿದ್ದು, ಕೈ, ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಈ ಸಂದರ್ಭದಲ್ಲಿ ಮೊದಲು ಶಾಸಕ ಸಂಗಮೇಶ್ ಪುತ್ರ ಗಣೇಶ್ ಮೇಲೆ ಸ್ನೇಹ ಜೀವಿ ಉಮೇಶ್ ಅಣ್ಷನ ಮಗ ಸುಹಾಸ್ ಹಲ್ಲೆ ನಡೆಸಲು ಮುಂದಾಗಿದ್ದ. ನಂತರ ಸ್ನೇಹ ಜೀವಿ, ಮಾಜಿ ಪೊಲೀಸ್ ಉಮೇಶ್ ಹಾಗೂ ಅವರ ಸಹೋದರನ ಮಗ ಸುಹಾಸ್ ಅವರ ಮೇಲೆ ಹಲ್ಲೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಈ ಪ್ರಕರಣದಿಂದ ಇದರಿಂದ ಜನರು ಬೆಚ್ಚಿಬಿದ್ದಿದ್ದರು. ಸಾರ್ವಜನಿಕ ಸ್ಥಳದಲ್ಲೇ ನಡೆದ ಈ ಪುಂಡಾಟಿಕೆಯಿಂದ ಜನರು ಬೆಚ್ಚಿಬಿದ್ದಿದ್ದರು. ಘಟನೆ ಸಂಬಂಧ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಮೂರು ಎಫ್ ಐ ಆರ್ ದಾಖಲಾಗಿದೆ. ಸದ್ಯ ಈ ಪ್ರಕರಣಗಳು ಈಗ ಜಿಲ್ಲೆಯ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ.
ಮೊದಲ ಪ್ರಕರಣದಲ್ಲಿ ಪರಮೇಶ್ ನೀಡಿದ ದೂರಿನ ಮೇರೆಗೆ ಸ್ನೇಹಜೀವಿ ಉಮೇಶ್, ಸುಹಾಸ್, ಪವನ್ @ ಗುಂಡ ಹಾಗೂ ಇತರರ ವಿರುದ್ಧ ಹಲ್ಲೆ, ಕೊಲೆ ಯತ್ನ ಸೇರಿದಂತೆ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ. ದೂರಿನ ಪ್ರಕಾರ, ಕಾರ್ಯಕ್ರಮದಲ್ಲಿ ಸನ್ಮಾನದ ವೇಳೆ ಉಮೇಶ್ ರಾಜಕೀಯ ವ್ಯಕ್ತಿಗಳಿಂದ ಸನ್ಮಾನ ಸ್ವೀಕರಿಸುವುದಿಲ್ಲ ಎಂದು ಹೇಳಿದ ನಂತರ ವಾಗ್ವಾದ ಆರಂಭವಾಗಿ, ಬಳಿಕ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ. ಈ ವೇಳೆ ಬಿ.ಎಸ್. ಗಣೇಶ್, ಸಂದೀಪ್ ಹಾಗೂ ಜನಾರ್ಧನ್ ಅವರಿಗೂ ಗಾಯಗಳಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಎರಡನೇ ಪ್ರಕರಣದಲ್ಲಿ ದರ್ಶನ್ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಸ್ನೇಹಜೀವಿ ಉಮೇಶ್, ಸುಹಾಸ್ ಹಾಗೂ ಇತರರ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಬಿ.ಎಸ್. ಗಣೇಶ್ ಪರ ನಿಂತಿದ್ದೀಯಾ ಎಂದು ಪ್ರಶ್ನಿಸಿ, ದೊಣ್ಣೆಯಿಂದ ತಲೆಗೆ ಹಲ್ಲೆ ನಡೆಸಿ ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ಮಾಡಲಾಗಿದೆ ಎಂದು ದರ್ಶನ್ ದೂರಿನಲ್ಲಿ ಆರೋಪಿಸಿದ್ದಾರೆ.
ಇನ್ನೊಂದೆಡೆ, ಹಲ್ಲೆಗೊಳಗಾದ ಸುಹಾಸ್ ನೀಡಿದ ಪ್ರತಿದೂರಿನ ಮೇರೆಗೆ ಬಿ.ಎಸ್. ಗಣೇಶ್, ಶಿವಣ್ಣ ಹಾಗೂ ಗಣೇಶ್ ಅವರ ದೊಡ್ಡಪ್ಪ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಸುಹಾಸ್ ದೂರಿನ ಪ್ರಕಾರ, ಕಾರ್ಯಕ್ರಮದ ಬಳಿಕ ವೇದಿಕೆ ಸಮೀಪ ಮಾತಿನ ಚಕಮಕಿ ನಡೆದಿದ್ದು, ವಿಡಿಯೋ ಮಾಡಬೇಡ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಿಯರ್ ಬಾಟಲಿ, ಕಬ್ಬಿಣದ ರಾಡ್, ಕುರ್ಚಿ ಹಾಗೂ ಇತರೆ ವಸ್ತುಗಳಿಂದ ಹಲ್ಲೆ ನಡೆಸಲಾಗಿದೆ. ತಾನು ಹಾಗೂ ತನ್ನ ಚಿಕ್ಕಪ್ಪ ಸ್ನೇಹಜೀವಿ ಉಮೇಶ್ ಗಾಯಗೊಂಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಒಟ್ಟಾರೆ, ಒಂದೇ ಕಾರ್ಯಕ್ರಮದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಎರಡು ಎಫ್ಐಆರ್ಗಳು ಸ್ನೇಹಜೀವಿ ಉಮೇಶ್ ಹಾಗೂ ಅವರ ಬೆಂಬಲಿಗರ ವಿರುದ್ಧ ದಾಖಲಾಗಿದ್ದರೆ, ಮತ್ತೊಂದು ಎಫ್ಐಆರ್ನಲ್ಲಿ ಬಿ.ಎಸ್. ಗಣೇಶ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಮೂರು ದೂರುಗಳನ್ನೂ ದಾಖಲಿಸಿಕೊಂಡಿರುವ ಭದ್ರಾವತಿ ನ್ಯೂಟೌನ್ ಪೊಲೀಸರು ತನಿಖೆ ಆರಂಭಿಸಿದ್ದು, ಘಟನೆಯ ನೈಜ ಸತ್ಯಾಂಶ ತನಿಖೆಯ ಬಳಿಕವೇ ಸ್ಪಷ್ಟವಾಗಲಿದೆ. ಒಟ್ಟಾರೆ ಖ್ಯಾತ ಗಾಯಕಿ ಎಸ್.ಜಾನಕಿ ಸ್ಮರಣಾರ್ಥ ನಡೆದ ಈ ಕಾರ್ಯಕ್ರಮಕ್ಕೆ ಹಲ್ಲೆ ಪ್ರಕರಣ ಕಪ್ಪು ಚುಕ್ಕಿಯಾಗಿದ್ದು, ಡಿವೈಎಸ್ಪಿ ಪ್ರಕಾಶ್ ರಾಥೋಡ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.
....
ಕೋಟ್
ಪ್ರಚೋದನಾತ್ಮಕ ಹೇಳಿಕೆಯಿಂದ ಈ ಗಲಾಟೆ ನಡೆದಿದೆ. ಅವರ ಪಾಡಿಗೆ ಬಂದು ಕಾರ್ಯಕ್ರಮ ಮುಗಿಸಿಕೊಂಡು ಹೋಗಿದ್ದರೇ ಏನು ಆಗುತ್ತಿರಲಿಲ್ಲ...ತನಿಖೆ ನಡೆಯುತ್ತಿದೆ.
-ಹೆಸರು ಹೇಳಲಿಚ್ಚಿಸದ ಪೊಲೀಸ್
ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದ ಸ್ನೇಹ ಜೀವಿ ಉಮೇಶ್
ಭದ್ರಾವತಿ: ಸ್ನೇಹಜೀವಿ ಉಮೇಶ್ ಹಾಗೂ ಆತನ ಅಣ್ಣನ ಮಗನ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಉಮೇಶ್ ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣಕ್ಕೆ ಹರಿಬಿಟ್ಟಿದ್ದರು. ಈ ಸಂಬಂಧ ನ್ಯಾಯಸಿಗದಿದ್ದರೆ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪೊಲೀಸ್ ಠಾಣೆ ಮುಂದೆ ಮಾಡಿರುವ ರಕ್ತಸಿಕ್ತ ವಿಡಿಯೋ ಮೂಲಕ ಹೇಳಿದ್ದು,
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೇ ಭದ್ರಾವತಿಯ ಜನರು ಈ ದೌರ್ಜನ್ಯವನ್ನು ಖಂಡಿಸಬೇಕು ಎಂದು ಮನವಿ ಮಾಡಿದ್ದಾರೆ.ಕ ಘಟನೆಗೆ ರಾಜಕೀಯ ಭಿನ್ನಾಭಿಪ್ರಾಯವೂ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಗಾಯಗೊಂಡ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಆಸ್ಪತ್ರೆಗೆ ದದಾಖಲಿಸಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ

ನಿಮ್ಮ ಅಭಿಪ್ರಾಯ ತಿಳಿಸಿ