ದಾವಣಗೆರೆ : ಸಿಎಂ ಡಿ.ಕೆ.ಶಿವಕುಮಾರ್ ಸಚಿವ ಸಂಪುಟ ವಿಸ್ತರಣೆ ಇಂದು ನಡೆಯಲಿದ್ದು, ದಾವಣಗೆರೆಯಲ್ಲಿ ಹಾಲಿ ಸಚಿವರಿಗಿದ್ದವರಿಗೆ ಕೋಕ್ ನೀಡಿದರೆ, ಶಿವಮೊಗ್ಗದಲ್ಲಿ ಹಾಲಿ ಸಚಿವರಿಗೆ ಮತ್ತೆ ಮಂತ್ರಿ ಸ್ಥಾನ ಸಿಕ್ಕಿದ್ದು, ಇಂದು ಸಂಜೆ ಪ್ರಮಾಣ ವಚನ ಸ್ವೀಕರಿಸುವರು.
ಸದ್ಯ 20 ನೂತನ ಸಚಿವರ ಅಧಿಕೃತ ಪಟ್ಟಿ ಬಿಡುಗಡೆಯಾಗಿದೆ. 13 ಮಂದಿ ಹೊಸಬರಿಗೆ ಅವಕಾಶ ನೀಡಲಾಗಿದೆ. ಒಬ್ಬ ಮಹಿಳೆಗೆ ಅವಕಾಶ ನೀಡಿದ್ದು, ಲಕ್ಷ್ಮೀ ಹೆಬ್ಬಾಳ್ಕರ್ಗೆ ಕೈತಪ್ಪಿದೆ.
ದಾವಣಗೆರೆಯಲ್ಲಿ ಹಾಲಿ ಸಚಿವರಾಗಿದ್ದ ಎಸ್.ಎಸ್.ಮಲ್ಲಿಕಾರ್ಜುನ್ ಗೆ ಕೋಕ್ ನೀಡಿ, ಅವರ ಶಿಷ್ಯ, ಮಾಜಿ ಸಚಿವ ಎಚ್.ಆಂಜನೇಯ ಅಳಿಯ ಕೆ.ಎಸ್.ಬಸವಂತಪ್ಪಗೆ ಸಚಿವ ಸ್ಥಾನ ನೀಡಲಾಗಿದೆ. ಇನ್ನು ಶಿವಮೊಗ್ಗದಲ್ಲಿ ಬೇಳೂರು ಗೋಪಾಲಕೃಷ್ಣ, ಶಾಸಕ ಸಂಗಮೇಶ್ ಬಿಟ್ಟು ಮಧು ಬಂಗಾರಪ್ಪರಿಗೆ ಮಣೆ ಹಾಕಲಾಗಿದೆ..
ಪ್ರಾದೇಶಿಕ ಸಮತೋಲನ, ಜಾತಿ ಸೇರಿದಂತೆ ಕಿರಿಯರು, ಹಿರಿಯರನ್ನು ಒಳಗೊಂಡ ಸಂಪುಟ ಇದಾಗಿದೆ. ಇನ್ನು ಲೋಕಭವನದ ಗಾಜಿನ ಮನೆಯಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಎಐಸಿಸಿ ಹೈಕಮಾಂಡ್ ನಾಯಕರು ಪಟ್ಟಿಯನ್ನು ಅಂತಿಮಗೊಳಿಸಿದ್ದು, ಆಕ್ಷೇಪ ಹಾಗೂ ಅಸಮಾಧಾನಕ್ಕೆ ಆಸ್ಪದವಾಗಬಾರದು ಎಂಬ ಕಾರಣಕ್ಕೆ ಸೋಮವಾರ ಬೆಳಗ್ಗೆವರೆಗೆ ಪಟ್ಟಿಯ ಗೌಪ್ಯತೆ ಉಳಿಸಿಕೊಳ್ಳಲಾಗಿತ್ತು. ಖಾಲಿ ಇರುವ 20 ಸ್ಥಾನಗಳ ಪೈಕಿ ಎಲ್ಲವನ್ನೂ ಭರ್ತಿ ಮಾಡಲಾಗಿದೆ.
ನೂತನ ಸಚಿವರ ಪಟ್ಟಿ ಇಲ್ಲಿದೆ
ನೂತನ ಸಚಿವರ ಹೆಸರು
1 ಪಿ. ಎಂ. ನರೇಂದ್ರಸ್ವಾಮಿ
2 ಶಿವರಾಜ್ ತಂಗಡಗಿ
3 ರುದ್ರಪ್ಪ ಲಮಾಣಿ
4 ಕೆ. ಎಸ್. ಬಸವಂತಪ್ಪ
5 ಬಿ. ನಾಗೇಂದ್ರ
6 ಟಿ. ರಘುಮೂರ್ತಿ
7ಬಿ. ಝಡ್. ಝಮೀರ್ ಅಹಮದ್ ಖಾನ್
8ರಿಜ್ವಾನ್ ಅರ್ಷದ್
9ಸಂತೋಷ್ ಲಾಡ್
10ಮಧು ಬಂಗಾರಪ್ಪ
11ಪುಟ್ಟರಂಗಶೆಟ್ಟಿ.
12ಮಂಕಾಳ ವೈದ್ಯ
13ಡಾ. ಅಜಯ್ ಸಿಂಗ್
14ಎನ್. ಚಲುವರಾಯ ಸ್ವಾಮಿ
15ಕೆ. ಎಂ. ಶಿವಲಿಂಗೇ ಗೌಡ
16ಎಚ್. ಸಿ. ಬಾಲಕೃಷ್ಣ
17ಗಾಯತ್ರಿ ಶಾಂತೇಗೌಡ
18ಬಸವರಾಜ ರಾಯರೆಡ್ಡಿ
19ವಿಜಯಾನಂದ ಕಾಶಪ್ಪನವರ್
20ಲಕ್ಷ್ಮಣ ಸವದಿಸಚಿವರ ಪಟ್ಟಿ ಜತೆಗೆ, ವಿಧಾನ ಸಭಾಧ್ಯಕ್ಷರಾಗಿ ಜಿಎಸ್ ಪಾಟೀಲ್, ಉಪ ಸಭಾಧ್ಯಕ್ಷರಾಗಿ ಪೊನ್ನಣ್ಣ, ವಿಧಾನ ಪರಿಷತ್ ಸಭಾಪತಿಯಾಗಿ ಸಭಾಪತಿಯಾಗಿ ಸಲೀಂ ಅಹ್ಮದ್, ಉಪ ಸಭಾಪತಿಯಾಗಿ ಉಮಾಶ್ರೀ ಅವರನ್ನು ಆಯ್ಕೆ ಮಾಡಲಾಗಿದೆ.
...
ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಹಾಗೂ ಸೊರಬ ಶಾಸಕ ಮಧು ಬಂಗಾರಪ್ಪ ಅವರು ಕರ್ನಾಟಕ ರಾಜಕೀಯದಲ್ಲಿ ಪ್ರಮುಖ ಕಾಂಗ್ರೆಸ್ ನಾಯಕರಾಗಿದ್ದು, ಇತ್ತೀಚಿನ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಚರ್ಚೆಯಲ್ಲಿದ್ದರು.
ರಾಜಕೀಯ ಹಿನ್ನೆಲೆ
ಕೆ.ಎಸ್. ಬಸವಂತಪ್ಪ: ಇವರು ದಾವಣಗೆರೆ ಜಿಲ್ಲೆಯ ಮಾಯಕೊಂಡ ಕ್ಷೇತ್ರದ ಶಾಸಕರಾಗಿದ್ದು, ದಲಿತ ಸಮುದಾಯದ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.
ಮಧು ಬಂಗಾರಪ್ಪ: ಇವರು ಶಿವಮೊಗ್ಗ ಜಿಲ್ಲೆಯ ಸೊರಬ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಪುತ್ರರಾಗಿದ್ದಾರೆ.






ನಿಮ್ಮ ಅಭಿಪ್ರಾಯ ತಿಳಿಸಿ