ಸುದ್ದಿ ಪೋರ್ಟಲ್

Deamweb News

ತಾಜಾ ಸುದ್ದಿ
ಇತ್ತೀಚಿನ ಸುದ್ದಿಗಳನ್ನು ಲೋಡ್ ಮಾಡಲಾಗುತ್ತಿದೆ...

ಮುಖಪುಟ / ಸುದ್ದಿ ವಿವರ

ಭದ್ರಾವತಿ ವೀರಶೈವ ಲಿಂಗಾಯಿತ ಸಮಾಜಕ್ಕೆ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಕಲ್ಪನಾ ಮಂಜುನಾಥ್ ಹಾಗೂ ಯುವ ಘಟಕದ ಅಧ್ಯಕ್ಷ ಸಾಗರ್ ಡಿ ಆರ್ ನೇಮಕ .....

 



ಭದ್ರಾವತಿ : ನಗರದ ಸಿದ್ದಾರೂಢ ಮಠದ ತಾಲೂಕು ಕಚೇರಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಯುವ ಮತ್ತು ಮಹಿಳಾ ಘಟಕದ ಅಧ್ಯಕ್ಷರನ್ನು ಕಾರ್ಯಾಕಾರಿ ಸಮಿತಿ  ಭಾನುವಾರ ಆಯ್ಕೆ ಮಾಡಿದೆ. 

ಅಧ್ಯಕ್ಷ  ಕೆ.ಎಸ್.ವಿಜಯ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಕಲ್ಪನಾ ಮಂಜುನಾಥ್ ಹಾಗೂ ಯುವ ಘಟಕದ ಅಧ್ಯಕ್ಷ ಸಾಗರ್ ಡಿ ಆರ್ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ನೂತನ ಯುವ ಘಟಕ ಅಧ್ಯಕ್ಷ ಡಿ.ಆರ್.ಸಾಗರ್ ಮಾತನಾಡಿ, ಅಧ್ಯಕ್ಷ ವಿಜಯ್ ಕುಮಾರ್ ನೇತೃತ್ವದಲ್ಲಿ ಸಂಘಟನೆ ಬಲಪಡಿಸುವುದು ನಮ್ಮ ಮುಖ್ಯ ಉದ್ದೇಶ. ಸಮಾಜದ ಬಂದುಗಳಿಗೆ ತೊಂದರೆಯಾದ ವೇಳೆ ಅವರ ಬೆಂಬಲಕ್ಕೆ ನಿಲ್ಲುವುದಲ್ಲದೇ ಅವರಿಗೆ ನ್ಯಾಯ ಕೊಡಿಸುವುದು. ಅಲ್ಲದೇ ನಮ್ಮದೇ ಸ್ವಂತ ಕಟ್ಟಡಕ್ಕೆ ನಿವೇಶನ ಮಂಜೂರಿಗೆ ಪ್ರಯತ್ನ ಮಾಡಲಾಗುವುದು ಎಂದರು.

ನೂತನ ಮಹಿಳಾಘಟಕದ ಅಧ್ಯಕ್ಷೆ ಕಲ್ಪನಾ ಮಂಜುನಾಥ್ ಮಾತನಾಡಿ, ವೀರಶೈವ ಲಿಂಗಾಯತ ಮಹಿಳಾಸಮಾಜದ ಶ್ರೇಯೋಭಿವೃದ್ದಿಗೆ ದುಡಿಯುವುದು..ಅವರಲ್ಲಿರುವ ಕಲೆಗಳನ್ನು ಹೊರತಂದು ಮಹಿಳೆಯರಲ್ಲಿಯೂ ವಿಭಿನ್ನ ಶಕ್ತಿ ಇದೆ ಎಂಬುದನ್ನು ತೋರಿಸುವುದಕ್ಕೆ ಸತತ ಪ್ರಯತ್ನ ಮಾಡುತ್ತೇನೆ..ಅದಕ್ಕಾಗಿ ನಿಮ್ಮೇಲ್ಲರ ಸಹಕಾರ ಅಗತ್ಯ ಎಂದರು.











ವೀರಶೈವ ಲಿಂಗಾಯತ ಸಮಾಜದ ತಾಲೂಕು ಅಧ್ಯಕ್ಷ ಕೆ.ಎಸ್.ವಿಜಯ್ ಕುಮಾರ್ ಮಾತನಾಡಿ, ಯುವ ಘಟಕ, ಮಹಿಳಾ ಅಧ್ಯಕ್ಷರನ್ನು ನೂತನವಾಗಿ ಆಯ್ಕೆ ಮಾಡಿದ್ದು, ಸಮಾಜದ ಏಳ್ಗೇಗೆ ದುಡಿಯಲಿ..ಸಂಘಟನೆಗೆ ಸಹಕಾರ ಮುಖ್ಯ, ಸಹಕಾರವಿದ್ದರೇ ಏನು ಬೇಕಾದರೂ ಸಾಧನೆ ಮಾಡಬಹುದು..ಹಾಗಾಗಿ ಇಬ್ಬರು ಕೂಡ ಸಮಾಜಕ್ಕೆ ದುಡಿಯಲಿ ಎಂದರು. ಈ ಸಂದರ್ಭದಲ್ಲಿ ನಟರಾಜ್ ಹೆಚ್‍ಬಿ, ರಾಜಣ್ಣ, ಪ್ರಕಾಶ್, ಜಗದೀಶ್ ಕೂಡ್ಲಿಗೆರೆ, ಚೆನ್ನಪ್ಪ, ಶೋಭಾ, ರೂಪ, ಉಷಾ ಸೇರಿದಂತೆ ಇತರರು ಇದ್ದರು.

Nandheesh kumar ac
Deamweb News ಪೋರ್ಟಲ್‌ನ ಸಂಪಾದಕೀಯ ಮಂಡಳಿ. ನಿಖರ, ನಿಷ್ಪಕ್ಷಪಾತ ಹಾಗೂ ಕ್ಷಣಕ್ಷಣದ ತಾಜಾ ಸುದ್ದಿಗಳನ್ನು ಒದಗಿಸುವುದು ನಮ್ಮ ಗುರಿ.

ನಿಮ್ಮ ಅಭಿಪ್ರಾಯ ತಿಳಿಸಿ