ಸುದ್ದಿ ಪೋರ್ಟಲ್

Deamweb News

ತಾಜಾ ಸುದ್ದಿ
ಇತ್ತೀಚಿನ ಸುದ್ದಿಗಳನ್ನು ಲೋಡ್ ಮಾಡಲಾಗುತ್ತಿದೆ...

ಮುಖಪುಟ / ಸುದ್ದಿ ವಿವರ

ಮಣಿಪಾಲ್ ಆರೋಗ್ಯ ಕಾರ್ಡ್ ನೋಂದಣಿ ಆರಂಭ : ಆಗಸ್ಟ್ 31 ಕೊನೆದಿನಾಂಕ



ದಾವಣಗೆರೆ : ಕುಟುಂಬದ ಸುರಕ್ಷತೆಗಾಗಿ ಮಣಿಪಾಲ್ ಕಾರ್ಡ್ ಅಗತ್ಯವಾಗಿದ್ದು, ಶೀಘ್ರವೇ ನೋಂದಣಿ ಮಾಡಿಸಬೇಕೆಂದು ವ್ಯವಸ್ಥಾಪಕರಾದ ಮೋಹನ್ ಶೆಟ್ಟಿ ಮತ್ತು ಕೃಷ್ಣ ಪ್ರಸಾದ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ಮಣಿಪಾಲ್ ಕಸ್ತೂರ ಬಾ ಆಸ್ಪತ್ರೆಯ ಅರೋಗ್ಯ ಕಾರ್ಡ್ 2026ರ ನೋಂದಣಿ ಪ್ರಾರಂಭವಾಗಿದ್ದು ಆಗಸ್ಟ್ 31 ನೋಂದಣಿ ಕೊನೆದಿನವಾಗಿದೆ.  ಇನ್ನು ಪಕ್ಕದ ರಾಜ್ಯದ ಕುಟುಂಬಗಳಿಗೆ  ಅತ್ಯಂತ ಕಡಿಮೆ ದರದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ಪಡೆಯಲು ಈ ಕಾರ್ಡ್ ಬಳಸಬಹುದು.ಕಳೆದವರ್ಷ 2ಲಕ್ಷ ಕುಟುಂಬಗಳು ಸುಮಾರು 6.5ಲಕ್ಷ ಸದಸ್ಯರು ನೋಂದಣಿ ಮಾಡಿಸಿದ್ದರು ಎಂದರು.

 ಕಾರ್ಡ್ ನೋಂದಣಿ ನಂತರದ ತಿಂಗಳ 15ತಾರಿಕಿನಿಂದ ಪ್ರಯೋಜನಗಳು ಜಾರಿಗೆ ಬರುತ್ತವೆ, ಇದು ಆಗಸ್ಟ್ 15-2027ರ ವರೆಗೂ ಜಾರಿಯಲ್ಲಿರುತ್ತದೆ ಎಂದು ಮಾಹಿತಿ ನೀಡಿದರು. 

ಮಣಿಪಾಲ್ ಕಸ್ತೂರ್ಬಾ ಆಸ್ಪತ್ರೆ, ಉಡುಪಿಯ  ಡಾ : ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಲ, ಮಂಗಳೂರು ಮತ್ತು ಅತ್ತಾವರದ, ಕೆ ಎಂ ಸಿ ಆಸ್ಪತ್ರೆ , ಕಟೀಲಿನ ದುರ್ಗಾ ಸಂಜೀವಿನಿ ಮಣಿಪಾಲ್ ಆಸ್ಪತ್ರೆ,ಗೋವಾದ ಮಣಿಪಾಲ್ ಆಸ್ಪತ್ರೆ  ಹಾಗು ಮಣಿಪಾಲ್ ಮತ್ತು ಮಂಗಳೂರಿನಲ್ಲಿರುವ ಮಣಿಪಾಲ್ ದಂತ ಹಾಗು ಆಯುರ್ವೇದ ಆಸ್ಪತ್ರೆ ಗಳಲ್ಲಿ ಈ ಕಾರ್ಡ್ ನ ಬಳಕೆ ಮಾಡಬಹುದು. ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ 9980854700, ದೂ -0820   2923748 ಜೊತೆಗೆ ಆಸ್ಪತ್ರೆ ವೆಬ್ ಸೈಟ್ ಸೇರಿದಂತೆ ಆಯಾ ಜಿಲ್ಲೆಗಳಲ್ಲಿ ಮಾಹಿತಿಕೇಂದ್ರದ ಪ್ರತಿನಿದಿಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ

Nandheesh kumar ac
Deamweb News ಪೋರ್ಟಲ್‌ನ ಸಂಪಾದಕೀಯ ಮಂಡಳಿ. ನಿಖರ, ನಿಷ್ಪಕ್ಷಪಾತ ಹಾಗೂ ಕ್ಷಣಕ್ಷಣದ ತಾಜಾ ಸುದ್ದಿಗಳನ್ನು ಒದಗಿಸುವುದು ನಮ್ಮ ಗುರಿ.

ನಿಮ್ಮ ಅಭಿಪ್ರಾಯ ತಿಳಿಸಿ