ನಂದೀಶ್ ಭದ್ರಾವತಿ, ಶಿವಮೊಗ್ಗ
ಆಗೊಂದು ಕಾಲವಿತ್ತು, ಭದ್ರಾವತಿ ವಿಎಸ್ಐಎಲ್, ಎಂಪಿಎಂ ನೌಕರರು ತುಂಬಿ ಇಡೀ ನಗರ ಕಾರ್ಮಿಕರಿಂದ ತುಂಬಿತ್ತು..ಆಗ ಶುರುವಾಗಿದ್ದೇ ಶಿವಪತ್ತಿನ ಸಹಕಾರ ಸಂಘ..ಈಗ ಈ ಸಂಘ ದೊಡ್ಡದಾಗಿ ಬೆಳೆದು ಭದ್ರಾವತಿ ನಗರದಲ್ಲಿ ಉತ್ತಮ ಸಹಕಾರ ಸಂಘ ಎಂಬ ಖ್ಯಾತಿ ಪಡೆದಿದೆ..
ಭದ್ರಾವತಿಯ ಓಲ್ಡ್ ಟೌನ್ ಪೊಲೀಸ್ ಠಾಣೆಯ ಚಿಕ್ಕ ಕಚೇರಿಯಲ್ಲಿ ಕೇವಲ ಇನ್ನೂರು ಸದಸ್ಯರಿಂದ ಆರಂಭವಾದ ಈ ಕೋ ಆಪರೇಟಿವ್ ಬ್ಯಾಂಕ್ ಈಗ ಮೂರು ಸಾವಿರ ಸದಸ್ಯರನ್ನು ಹೊಂದಿದೆ..ಅಲ್ಲದೇ ಸ್ವಂತ ಕಟ್ಟಡವನ್ನು ಹೊಂದಿದ್ದು, ಯಾವುದೇ ಅಪಖ್ಯಾತಿ ಬರದೇ ಯಶಸ್ಸಿನ ಹಾದಿಯಲ್ಲಿ ನಡೆಯುತ್ತಿದೆ.
2000 ಇಸವಿಯಲ್ಲಿ ಆರಂಭ
ಶಿವ ಪತ್ತಿನ ಸಹಕಾರ ಸಂಘ 2000 ಇಸವಿಯಲ್ಲಿ ಪಾದಾರ್ಪಣೆ ಮಾಡಿತ್ತು. ಆರಂಭದಲ್ಲಿದ್ದ ನೌಕರರೇ ಇಂದು ಕೂಡ ಇದ್ದು, ಸುಮಾರು ಇಪ್ಪಾತ್ತಾರು ವರ್ಷಗಳ ಕಾಲ ಸೇವೆ ಸಲ್ಲಿ
ಸುವ ಮೂಲಕ ಸಂಘದ ಶ್ರೇಯೋಭಿವೃದ್ದೀಗೆ ಶ್ರಮಿಸುತ್ತಿದ್ದಾರೆ.
ಈ ಬಾರಿ 21 ಲಕ್ಷ ನಿವ್ವಳ ಲಾಭ
ಶಿವಪತ್ತಿನ ಸಹಕಾರ ಸಂಘ ವರ್ಷದಿಂದ ವರ್ಷಕ್ಕೆ ಲಾಭದತ್ತ ನಡೆಯುತ್ತಿದ್ದು, 2026-2027 ನೇ ಸಾಲಿನಲ್ಲಿ ಸುಮಾರು 21 ಲಕ್ಷ ಲಾಭಗಳಿಸಿದೆ. ಈ ಮೂಲಕ ಸಂಘದ ಸದಸ್ಯರ ನಂಬಿಕೆಯನ್ನು ಉಳಿಸಿಕೊಂಡಿರುವುದು ವಿಶೇಷ.
ಶೇ.15 ರಷ್ಟು ಡಿವೆಡೆಂಟ್
2026-2027 ನೇ ಸಾಲಿನಲ್ಲಿ ಶಿವ ಪತ್ತಿನ ಸಹಕಾರ ಸಂಘ ತನ್ನ ಸದಸ್ಯರಿಗೆ ಶೇ.15 ರಷ್ಟು ಡಿವೆಡೆಂಟ್ ನೀಡಿದೆ. ಕಳೆದ ವರ್ಷ ಶೇ.14 ರಷ್ಟು ಡಿವೆಡೆಂಟ್ ನೀಡಿತ್ತು.
ಆರಂಭದಲ್ಲಿದ್ದ ಅಧ್ಯಕ್ಷರೇ ಈಗಲೂ ಅಧ್ಯಕ್ಷರು
ಒಂದು ಮನೆ ಚೆನ್ನಾಗಿರಾಬೇಕಾದರೆ ಯಜಮಾನ ಸರಿ ಇರಬೇಕಿದೆ..ಆಗ ಮಾತ್ರ ಮನೆ ಚೆನ್ನಾಗಿ ನಡೆಯುತ್ತದೆ ಎನ್ನುವುದಕ್ಕೆ ಈ ಸಂಘನೇ ಸಾಕ್ಷಿಯಾಗಿದ್ದು, ಆರಂಭದಲ್ಲಿದ್ದ ಅಧ್ಯಕ್ಷ ಜಿ.ಎಸ್.ಸತೀಶ್ ಈ ಸಂಘದ ನೇತೃತ್ವವಹಿಸಿದ್ದು, ಯಾವುದೇ ಮುಲಾಜಿಲ್ಲದೇ ವಸ್ತುನಿಷ್ಠವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ ಯಾವುದೇ ಒತ್ತಡಕ್ಕೆ ಮಣಿಯದೇ ಸಂಘದ ಧೈಯೋದ್ದೇಶಕ್ಕೆ ಅನುಗುಣವಾಗಿ ಕೆಲಸ ಮಾಡುತ್ತಿದ್ದಾರೆ. ಈ ಕಾರಣದಿಂದಲೇ ಸಂಘ ಅಭಿವೃದ್ದಿಯತ್ತ ಸಾಗುತ್ತಿದೆ.
ಹನ್ನೊಂದು ಜನ ನಿರ್ದೇಶಕರು
ಸಂಘದಲ್ಲಿ ಹನ್ನೊಂದು ಜನ ನಿರ್ದೇಶಕರು ಇದ್ದು, ಸಂಘದ ಅಭಿವೃದ್ದಿಗೆ ಪ್ರತ್ಯೇಕ್ಷವಾಗಿ ಪರೋಕ್ಷವಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಉಪಾಧ್ಯಕ್ಷ ಎಚ್.ಬಿ.ಸಿದ್ದೇಶ್, ನಿರ್ದೇಶಕರಾಗಿ ಟಿ.ಜಿ.ಬಸವರಾಜಯ್ಯ, ಎನ್.ಎಸ್.ಮಹೇಶ್ವರಪ್ಪ, ಬಿ.ಪಿ.ಶಂಕರ್, ಎಚ್.ಎಸ್.ಸಂಜೀವ್ ಕುಮಾರ್, ಈ.ಜಿ.ಹನುಮಂತಪ್ಪ , ಎಚ್.ಮಂಜುನಾಥ್, ಕೆ.ಎಸ್.ಓಂಪ್ರಕಾಶ್, ಯಶೋಧ ವೀರಭದ್ರಪ್ಪ, ಎಲ್.ಎಸ್.ರೂಪ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.
ಕಾರ್ಯಕ್ಷಮತೆ ಹೊಂದಿರುವ ಕಾರ್ಯದರ್ಶಿ ಏಕಾಕ್ಷರಪ್ಪ
ಒಂದು ಸಂಘಕ್ಕೆ ಕಾರ್ಯದರ್ಶಿ ಬಹು ಮುಖ್ಯ ಪಾತ್ರವಹಿಸಿದ್ದು, ಎಲ್ಲ ಲೆಕ್ಕಾಚಾರವನ್ನು ಪಾರದರ್ಶಕವಾಗಿ ಮಾಡುತ್ತಿದ್ದಾರೆ. ಅಲ್ಲದೇ ಸಂಘದ ಬೈಲಾದ ಪ್ರಕಾರ, ಕಾನೂನು ನಿಯಮಗಳೊಂದಿಗೆ ಸಂಘದ ಅಭಿವೃದ್ದೀಗೆ ಕಾರ್ಯದರ್ಶಿ ಬಿ.ಜಿ.ಏಕಾಕ್ಷರಪ್ಪ ಶ್ರಮಿಸುತ್ತಿದ್ದಾರೆ.
ಸಂಘಕ್ಕೆ ಅಕೌಟೌಟೆಂಟ್ ಕುಮಾರ್ ಶ್ರಮ
ಶಿವಪತ್ತಿನ ಸಹಕಾರ ಸಂಘಕ್ಕೆ ಅಕೌಟೌಟೆಂಟ್ ಕುಮಾರ್ ಹಗಲಿರುಳು ಶ್ರಮಪಡುತ್ತಿದ್ದು, ಒಂದು ರೂಪಾಯಿ ಲೆಕ್ಕ ಮಿಸ್ ಮಾಡದೇ ಕೆಲಸ ಮಾಡುತ್ತಿದ್ದಾರೆ. ಆರಂಭದಿಂದಲೂ ಇವರು ಕೆಲಸ ಮಾಡುತ್ತಿದ್ದು, ಎಲ್ಲ ಲೆಕ್ಕಕ್ಕೂ ರಶೀದಿ ನೀಡುವ ಮೂಲಕ ಪಾರದರ್ಶಕತೆ ಮೆರೆಯುತ್ತಿದ್ದಾರೆ.
ಸಂಘಕ್ಕೆ ಆದಾಯ ತರುತ್ತಿರುವ ಪಿಗ್ಮಿ ಏಜೆಂಟ್ ಗಳು
ಶಿವಪತ್ತಿನ ಸಹಕಾರ ಸಂಘಕ್ಕೆ ಇಬ್ಬರು ಪಿಗ್ಮಿ ಏಜೆಂಟ್ ಗಳಿದ್ದು, ಪ್ರತಿ ದಿನ ಹಣ ತರುವ ಮೂಲಕ ಸಂಘಕ್ಕೆ ಹರೀಶ್ ಹಾಗೂ ಸಚ್ಚಿದಾಮದಯ್ಯ ಲಾಭ ತರುತ್ತಿದ್ದಾರೆ.
ಆಲ್ ರೌಂಡರ್ ಅಟೆಂಡರ್ ಕಿರಣ್
ಕಿರಣ್ ಈತ ಅಟೆಂಡರ್ ಆದರೂ ಆಲ್ ರೌಂಡರ್. ಸಂಘದ ಎಲ್ಲ ಕೆಲಸಗಳನ್ನು ಮಾಡುವ ಮೂಲಕ ಇತರರಿಗೆ ಆಗುವ ಒತ್ತಡವನ್ನು ತಪ್ಪಿಸುವ ಮೂಲಕ ಸಂಘಕ್ಕೆ ಪರೋಕ್ಷವಾಗಿ ಕೆಲಸ ಮಾಡುತ್ತಿದ್ದಾನೆ. ಒಟ್ಟಾರೆ ಉಕ್ಕಿನ ನಗರಿಯಲ್ಲಿ ಶಿವಪತ್ತಿನ ಸಹಕಾರ ಸಂಘ ತನ್ನ ಪಾಡಿಗೆ ಅಭಿವೃದ್ದಿಯತ್ತ ಸಾಗುತ್ತಿದ್ದು, ಒಟ್ಟಾಗಿ ಕೆಲಸ ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂದು ತೋರಿಸಿಕೊಟ್ಟಿದೆ.
....
ಸಂಘದಿಂದ ಸದಸ್ಯರಿಗೆ ಏನು ಲಾಭ
ವಾಹನ, ಮನೆ ಸೇರಿದಂತೆ ಇತರೆ ಸಾಲ
ಸದಸ್ಯರಿಗೆ ಯಶಸ್ವಿನಿ ಯೋಜನೆ
ಸದಸ್ಯರಿಗೆ ಕ್ಷೇಮಾಭಿವೃದ್ಧಿ ಯೋಜನೆ
ಸದಸ್ಯರಿಗೆ ಜಾಮೀನು ಸಾಲ
ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ
...
ಶಿವಪತ್ತಿನ ಸಹಕಾರ ಸಂಘಕ್ಕೆ ಬಿ.ಶ್ರೇಣಿ
ಶಿವಪತ್ತಿನ ಸೊಸೈಟಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಆಡಿಟ್ ವರ್ಗ ಬಿ ಶ್ರೇಣಿ ನೀಡಿದೆ.
....
ಸಂಘದ ಸಾಲಗಳ ಪರಿಷ್ಕೃತ ಬಡ್ಡಿ ದರಗಳು
ಬಂಗಾರದ ಆಭರಣ ಸಾಲ 11%
ಸ್ಥಿರಾಸ್ತಿ ಸಾಲ. 11%
ದ್ವಿಚಕ್ರ ವಾಹನ ಸಾಲ 11%
4 ಚಕ್ರ ವಾಹನ ಸಾಲ 11%
ವೇತನಾಧಾರ ಸಾಲ 12%
ಜಾಮೀನು ಸಾಲ 13%
...
ಹಿರಿಯ ನಾಗರಿಕರಿಗೆ 0.50% ಹೆಚ್ಚಳ
ಉಳಿತಾಯ ಖಾತೆ 3%
ರೆಕರಿಂಗ್ ಠೇವಣಿ 1 ವರ್ಷಕ್ಕೆ 7%
ಖಾಯಂ ಠೇವಣಿ
46 ರಿಂದ 90 ದಿನಗಳವರೆಗೆ 5%
91ರಿಂದ 180 ದಿನಗಳವರೆಗೆ 6%
181ರಿಂದ 364ದಿನಗಳವರೆಗೆ 6.50%
1ವರ್ಷಕ್ಕೆ 7%
....
2025-2026ರ ವಿವರ
ಸದಸ್ಯತ್ವ ಸಂಖ್ಯೆ -1999
ಷೇರು ಬಂಡವಾಳ-54,43000
ಠೇವಣಿಗಳು-8,69,29,039
ಆಪದ್ಬನ ನಿಧಿ ಮತ್ತು ಇತರೆ ನಿಧಿ-1,12,982
ದುಡಿಯುವ ಬಂಡವಾಳ-11,52,62,370
ಕೊಟ್ಟ ಸಾಲಗಳು-5,20,84,326
ನಿವ್ವಳ ಲಾಭ-21,79,418













ನಿಮ್ಮ ಅಭಿಪ್ರಾಯ ತಿಳಿಸಿ