ನಂದೀಶ್ ಭದ್ರಾವತಿ, ಶಿವಮೊಗ್ಗ
ಸಾಯಿ ನೋಡಲು ಸಾವಿರಾರು ಜನ, ಸ್ವಚ್ಛತೆ, ನಾನಾ ಪೂಜೆ ಪುನಸ್ಕಾರಗಳು, ಪಾರದರ್ಶಕತೆ, ನಾನೊಬ್ಬನೇ ಅಲ್ಲ ಎಲ್ಲರೂ ಸೇರಿ ಕೆಲಸ ಮಾಡೋಣ ಎಂಬ ಮನೋಭಾವನೆ...ಇದು ಜಿಲ್ಲೆಯ ನಿಧಿಗೆ ಬಳಿ ಇರುವ ಶ್ರೀ ಸಾಯಿಮಂದಿರದ ಅಧ್ಯಕ್ಷ ಎಸ್.ಬಿ.ತೋಟದ್ ಅವರ ವೈಖರಿ...
ನಿದಿಗೆಯ ಶ್ರೀ ಸಾಯಿಬಾಬಾ ಮಂದಿರದಲ್ಲಿ ಅದ್ದೂರಿಯಾಗಿ ಗುರುಪೂರ್ಣಿಮೆ ಆಚರಣೆ ಮಾಡಲಾಯಿತು... ಸುಮಾರು 50ಸಾವಿರ ಭಕ್ತರು ಸೇರಿದ್ದರು. ಎಲ್ಲ ಭಕ್ತರಿಗೆ ಪ್ರಸಾದವಿತ್ತು. ಈ ಮಂದಿರದಲ್ಲಿ ಯಾವುದೇ VViP ಸಂಸ್ಕೃತಿ ಇರಲಿಲ್ಲ. ಬರುವಂತ ಎಲ್ಲಾ ಸಾಯಿಭಕ್ತರು ಸಮಾನರು ಎಂಬುದು ತೋಟದ್ ಅವರ ಮಾತು.
ಅದ್ದೂರಿ ಗುರು ಪೂರ್ಣಿಮೆ
ಗುರುಪೂರ್ಣಿಮೆ ಮುನ್ನಾದಿನ ಹೋಮ ಹವನಗಳು ನಡೆದವು. 9ಗಂಟೆಯಿಂದ ಕಾರ್ಯಕ್ರಮಗಳು ಪ್ರಾರಂಭವಾಗಿತ್ತು. ಮೊದಲಿಗೆ ಸಾಯಿಸತ್ಯನಾರಾಯಣ ಪೂಜೆಪ್ರಾರಂಭವಾಯಿತು. ನಂತರರಾತ್ರಿವರೆಗೂ ಬಾಬಾಗೆ ವಿಶೇಷ ಪೂಜೆ ಆರತಿಗಳು ನಡೆದವು. ಈ ಸಂದರ್ಭದಲ್ಲಿ ಸುಮಾರು 15 ಭಜನಾ ಮಂಡಳಿಯವರಿಂದ ನಿರಂತರವಾಗಿ ಭಜನಾಕಾರ್ಯಕ್ರಮವಿತ್ತು..ಇದರಲ್ಲಿ ವಿಶೇಷವಾಗಿ ಪುಟ್ಟರಾಜುಗವಾಯಿ ಅಂಧಮಕ್ಕಳ ಭಜನಾಕಾರ್ಯಕ್ರಮವಿತ್ತು. ಜೊತೆಗೆ ವೀರಗಾಸೆ ಹಾಗು ಭರತನಾಟ್ಯಕಾರ್ಯಕ್ರಮಗಳು ನಡೆದವು.
ಪೂರ್ಣಾಹುತಿ ಹೋಮ
ಗುರುಪೂರ್ಣಿಮೆ ನಿಮಿತ್ತ ರುದ್ರಹೋಮ ಮತ್ತು ಗಣಪತಿ ಹೋಮ, ಪೂರ್ಣಾಹುತಿ ಹೋಮ ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು.ಪೂಜಾದ್ರವ್ಯಗಳು ಹಾಗೂ ಪೂರ್ಣಾಹುತಿಯ ಪದಾರ್ಥಗಳನ್ನು ಅಗ್ನಿಗೆ ಸಮರ್ಪಿಸುವ ಮೂಲಕ ಸಕಲರಿಗೆ ಸನ್ಮಂಗಳಗಳನ್ನು ಉಂಟುಮಾಡುವಂತೆ ಪ್ರಾರ್ಥಿಸಲಾಯಿತು.
ನಂಬಿದವರನ್ನು ಕೈ ಬಿಡೋದಿಲ್ಲ ಬಾಬಾ
ಶಿರಡಿ ಸಾಯಿಬಾಬಾರನ್ನು ಶ್ರದ್ಧೆ ಮತ್ತು ಭಕ್ತಿಯಿಂದ ನಂಬಿ ಪೂಜಿಸುವವರನ್ನು ಸಾಯಿ ಭಕ್ತ ಎನ್ನಲಾಗುತ್ತದೆ. ಓಂ ಸಾಯಿ ರಾಮ್ ಜಪ, ಸಾಯಿ ವ್ರತ ಹಾಗೂ ಸಾಯಿ ಬಾಬಾ ಭಕ್ತಿ ಹಾಡುಗಳು ಇವರ ಆರಾಧನೆಯ ಪ್ರಮುಖ ಮುಖ್ಯ ಅಂಶಗಳಾಗಿವೆ ಎಂದು ಸಾಯಿ ಭಕ್ತ ತೋಟದ್ ಹೇಳುತ್ತಾರೆ.
...
ಸಾಯಿಗೆ ವಿಶೇಷ ಪೂಜೆ
ಸಾಯಿ ಮಂದಿರದಲ್ಲಿ ಗುರುಪೂರ್ಣಿಮೆ ಅಂಗವಾಗಿ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ, ಅಷ್ಟೋತ್ತರ ಪೂಜೆ, ದೀಪಾರಾಧನೆ ಹಾಗೂ ಮಹಾಮಂಗಳಾರತಿ ನಡೆಯಿತು. ಸಾಯಿಬಾಬಾ ಮೂರ್ತಿಗೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು.ಬೆಳಗ್ಗೆ 6 ಗಂಟೆಗೆ ಕಾಕಡಾರತಿ-ಯೊಂದಿಗೆ ಪೂಜೆ ಆರಂಭವಾಯಿತು. 9 ಗಂಟೆಗೆ ದೀಪಾರಾಧನೆ, ಕಲಶ ಸ್ಥಾಪನೆ ಹಾಗೂ ಗೋಪುರ ಧ್ವಜಾರೋಹಣವೂ ನಡೆಯಿತು.
....
ಅಪಾರ ಜನಸ್ತೋಮ
ಗುರುಪೂರ್ಣಿಮೆ ನಿಮಿತ್ತ ಮುಂಜಾನೆಯಿಂದಲೇ ಅಪಾರ ಜನಸ್ತೋಮವಿತ್ತು. ಸಾಯಿ ಮಂದಿರದಲ್ಲಿ ಗುರುಪೂರ್ಣಿಮೆ ಪ್ರಯುಕ್ತ ವಿವಿಧ ಧಾರ್ಮಿಕ ಪೂಜೆ ನಡೆದವು. ಶಿರಡಿ ಸಾಯಿ ಸೇವಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಧಾರ್ಮಿಕ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು. ಗಣಹೋಮ, ಗುರುಹೋಮ, ಕಾಕಡರತಿ ಮತ್ತು ಪಂಚಾಮೃತ ಅಭಿಷೇಕ ನೆರವೇರಿತು. ಮಧ್ಯಾಹ್ನ ಪ್ರಸಾದ, ಸಂಜೆ ಧೂಪಾರತಿ ನಡೆಯಿತು. ಇನ್ನು ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ದೇವರ ದರ್ಶನಕ್ಕಾಗಿ ಸಾಲುಗಟ್ಟಿ ನಿಂತಿರುವ ದೃಶ್ಯ ಹಲವು ದೇವಸ್ಥಾನಗಳ ಬಳಿ ಕಂಡು ಬಂತು. ಸಾಯಿಬಾಬಾ ಮಂದಿರದ ಬಳಿ ಅರ್ಧ ಕಿ.ಮೀ. ವರೆಗೂ ಭಕ್ತರು ಸಾಲು ಕಂಡು ಬಂತು. ಭಕ್ತರಿಗಾಗಿ ಶಾಮಿಯಾನ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು.
.....
ಗಣಪತಿ ಹೋಮ
ಯಾವುದೇ ಹೊಸ ಕಾರ್ಯ ಆರಂಭಿಸುವ ಮೊದಲು ಗಣಪತಿ ಹೋಮ ಮಾಡುವುದು ವಾಡಿಕೆಯಾಗಿದ್ದು, ಗಣಪತಿ ಹೋಮ ನಡೆಯಿತು. ಇದರಿಂದ ಅಡೆತಡೆಗಳು ದೂರ, ಸಮೃದ್ಧಿಯಾಗುತ್ತದೆ. ಗಣಪತಿ ಹೋಮದಿಂದ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ ಎಂಬ ಅಭಿಪ್ರಾಯ ಭಕ್ತರದ್ದು.
.....
ರುದ್ರ ಹೋಮ
ಸಾಯಿ ಮಂದಿರದಲ್ಲಿ ರುದ್ರ ಹೋಮ ಅದ್ದೂರಿಯಾಗಿ ನಡೆಯಿತು. ಶಾಂತಿ ಹಾಗೂ ರಕ್ಷಣೆಯನ್ನು ಈ ಹೋಮ ನಡೆಯುತ್ತದೆ. ಈ ಹೋಮವು ನಕಾರಾತ್ಮಕ ಶಕ್ತಿಗಳನ್ನು ಹೊಡೆದೋಡಿಸಿ, ಮನಸ್ಸಿಗೆ ನೆಮ್ಮದಿ ನೀಡುತ್ತದೆ.ಆರೋಗ್ಯ ವೃದ್ಧಿ ಹಾಗೂ ಗ್ರಹದೋಷಗಳಿಂದ ಮುಕ್ತಿ ಪಡೆಯಲು ಇದು ಸಹಾಯ ಮಾಡುತ್ತದೆ.





ನಿಮ್ಮ ಅಭಿಪ್ರಾಯ ತಿಳಿಸಿ