ದಾವಣಗೆರೆ : ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘ ಹಾಗೂ ಹಿರಿಯ ಸಾಹಿತಿ ಪ್ರೊ H ಲಿಂಗಪ್ಪ ರಚಿಸಿದ "ಮಾತಂಗಿ ಕಥನ" ಕೃತಿ ಲೋಕಾರ್ಪಣೆ ಸಮಾರಂಭ ಭಾನುವಾರ ಬೆಳಗ್ಗೆ 11ಕ್ಕೆ ನಡೆಯಲಿದೆ.
ನಗರದ ರೋಟರಿ ಕ್ಲಬ್ ನಲ್ಲಿ ಈ ಕಾರ್ಯಕ್ರಮ ಜರುಗಲಿದೆ. ಮಾತಂಗಿ ದೇವಿಯ ಕುರಿತು ಅನೇಕ ವಿಷಯವನ್ನು ಎಚ್. ಲಿಂಗಪ್ಪ ಸಂಗ್ರಹಣೆ ಮಾಡಿ ಓದುಗರಿಗೆ, ಸಾಹಿತ್ಯ ಆಸಕ್ತರ ಮಡಲಿಗೆ ಒಪ್ಪಿಸುತ್ತಿದ್ದಾರೆ.
ಆಲೂರು ನಿಂಗರಾಜ್ ರಾಜ್ಯ ಉಪಾಧ್ಯಕ್ಷರು, ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘ ಕರ್ನಾಟಕ, ಇವರ ಅಧ್ಯಕ್ಷತೆಯಲ್ಲಿ ನಡೆಯುವ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಚಿಂತಕರಾದ ಡಾ ಬಿ.ಎ ವಸಂತ ಕುಮಾರ, ಜಾನಪದ ತಜ್ಞರು ಮೀರಸಾಬಿ ಬಿಹಳ್ಳಿ ಶಿವಣ್ಣ, ಸಾಹಿತಿಗಳಾದ ದಾಸನೂರ್ ಕೂಸಣ್ಣ,, ಸಿ ವಿ ಪಾಟೀಲ,ಮುತ್ತಣ್ಣ ಬೆಣ್ಣೂರು,ವಾಮದೇವಪ್ಪ, ಎಸ್ ರಾಜೇಂದ್ರ ಪ್ರಸಾದ್ ಭಾಗವಹಿಸಲಿದ್ದಾರೆ.
ಮುನ್ನುಡಿಯನ್ನು ಶ್ರೀ ಮೋದೂರು ತೇಜ ಬಹಳ ಸೊಗಸಾಗಿದೆ ಬರೆದಿದ್ದಾರೆ, ಬೆನ್ನುಡಿಯನ್ನು ಶ್ರೀ ಡಾ ಮಲ್ಲಿಕಾರ್ಜುನ್ ಕಮರಹಳ್ಳಿ ಬರೆದಿದ್ದಾರೆ. ಇನ್ನು ಲೇಖಕರಾದ ಪ್ರೊ H ಲಿಂಗಪ್ಪನವರು ತಲಸ್ಪರ್ಶ ಅಧ್ಯಯನ ಮಾಡಿ ಮಾತಂಗಿ ದೇವಿಯ ಬಹು ಆಯಾಮದ ವ್ಯಕ್ತಿತ್ವವನ್ನು ಈ ಪುಸ್ತಕದಲ್ಲಿ ಪ್ರಕಟ ಮಾಡಿದ್ದಾರೆ. ಅನೇಕ ಬರಹಗಾರರು ಮಾತಂಗಿ ಕುರಿತು ಪುಸ್ತಕ ರಚನೆ ಮಾಡಿದ್ದಾರೆ, ವಿಶೇಷವಾಗಿ ಮಾದಿಗ ಸಮಾಜಕ್ಕೆ ಇರುವ ಭವ್ಯವಾದ ಪರಂಪರೆ ಅಧ್ಯಾತ್ಮಿಕ ಹಿನ್ನಲೆ, ಸಂಸ್ಕೃತಿಕ ಸಾಂಸ್ಕೃತಿಕ ಕುರುಹು, ಜಾನಪದ ಸಾಹಿತ್ಯ, ವಚನ ಸಾಹಿತ್ಯ, ಮೌಖಿಕ ಸಾಹಿತ್ಯ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಇಂತಹದೊಂದು ತಿಳಿವಳಿಕೆ ನಮ್ಮ ಜನಾಂಗಕ್ಕೆ ಬೇಕು, ಮಾದಿಗರ ಇತಿಹಾಸದಲ್ಲಿ ಇರುವ ಪರಂಪರೆ ಹೆಜ್ಜೆ ಗುರುತುಗಳನ್ನು ಸಮಾಜದ ಯುವ ಪೀಳಿಗೆಗೆ ತಲುಪಿಸುವ ಪ್ರಯತ್ನ ಈ ಮಾತಂಗಿ ಕಥನ.ಮಾತಂಗ ಸಾಂಸ್ಕೃತಿಕ ಅಭಿಯಾನ ಭಾಗವಾಗಿ, 2026 ಸಾಲಿನ *ಮಾತಂಗಿ ಶ್ರೀ* ಗೌರವ ಪ್ರಶಸ್ತಿಯನ್ನು ಪ್ರೊ ಹೆಚ್ ಲಿಂಗಪ್ಪನವರಿಗೆ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ನಿಮ್ಮ ಅಭಿಪ್ರಾಯ ತಿಳಿಸಿ